ಕ್ಯಾಲಿಫೋರ್ನಿಯಾ, ಡಿ 7(Daijiworld News/MSP): ರಾತ್ರಿಯ ವೇಳೆ ಸುರಕ್ಷಿತವಾಗಿ ಮನೆ ಸೇರಲು ಸಹಾಯ ಮಾಡಲು ಗೂಗಲ್ ಮ್ಯಾಪ್ ಹೊಸ ಫೀಚರ್ ಒಂದನ್ನು ಜಾರಿಗೆ ತರಲು ಯೋಜನೆ ಸಿದ್ದಪಡಿಸಿದ್ದು ಇದಕ್ಕೆ ‘ಲೈಟಿಂಗ್’ ಎಂದು ಹೆಸರಿಸಲಾಗಿದೆ.
ಗೂಗಲ್ ನ XDA ಡೆವಲಪರ್ಸ್ ಈ ಯೋಜನೆಯನ್ನು ಸಿದ್ದಗೊಳಿಸುತ್ತಿದ್ದು , ಯಾವ ದಾರಿಯಲ್ಲಿ ಹೆಚ್ಚು ಟ್ರಾಫಿಕ್ ಇದೆ ಎಂದು ಗೂಗಲ್ ನಕ್ಷೆಗಳು ತೋರಿಸುವ ಮಾದರಿಯಂತೆ ‘ಲೈಟಿಂಗ್ ’ ಫೀಚರ್ ನಲ್ಲಿ ಯಾವ ದಾರಿ ಬೆಳಕಿನಿಂದ ಕೂಡಿ ಪ್ರಕಾಶಮಾನವಾಗಿದೆ, ಇನ್ನು ಯಾವ ದಾರಿಯಲ್ಲಿ ಮಂದ ಬೆಳಕು ಅಥವಾ ಪೂರ್ಣ ಕತ್ತಲಿದೆ ಎಂದು ಈ ಫೀಚರ್ ನ ವೈಶಿಷ್ಟ್ಯವಾಗಿದೆ. ಅಪ್ಲಿಕೇಶನ್ನ ಬೀಟಾ ಆವೃತ್ತಿಯ ಎಪಿಕೆ ಟಿಯರ್ಡೌನ್ನಲ್ಲಿ ಈ ವೈಶಿಷ್ಟ್ಯವನ್ನು ಕಂಡುಹಿಡಿಯಲಾಗಿದೆ.
ಪರೀಕ್ಷಾ ಹಂತದಲ್ಲಿರುವ ಈ ಹೊಸ ಫೀಚರ್ ಮಹಿಳೆಯರಿಗೆ ನೆರವಾಗಲಿದೆ ಎಂದು ಗೂಗಲ್ ಅಭಿಪ್ರಾಯಪಟ್ಟಿದ್ದು, ಮಹಿಳೆಯರ ಸುರಕ್ಷತೆಯು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವಾಗ ಭಾರತದಲ್ಲಿ ಮೊದಲು ಜಾರಿಗೆ ಬರಲಿದೆ ಮತ್ತು ಮಹಿಳಾ ಸುರಕ್ಷತೆಯಲ್ಲಿ ಈ ಫೀಚರ್ ಹೊಸ ಮೈಲಿಗಲ್ಲು ಸಾಧಿಸಲಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.