ನೈಜೀರೀಯಾ, ಡಿ 7(Daijiworld News/MSP): ನೈಜೀರಿಯಾದಿಂದ ತೈಲ ಹೊತ್ತು ಹೊರಟ ಕೆಲವೇ ಗಂಟೆಗಳಲ್ಲಿ ನೈಜೀರಿಯಾದ ಪಶ್ಚಿಮ ಕಡಲಿನ ಬಳಿ ಕಡಲ್ಗಳ್ಳರು ಅಪಹರಿಸಿದ ಹಾಂಕಾಂಗ್ ಮೂಲದ ಹಡಗಿನಲ್ಲಿ ಇಂಜಿನಿಯರ್ ದಂಪತಿ ಸೇರಿ 18 ಭಾರತೀಯರು ಹಾಗೂ ಒಬ್ಬ ಟರ್ಕಿ ಪ್ರಜೆ ಇದ್ದರು ಎನ್ನುವ ಮಾಹಿತಿ ಹೊರಬಿದ್ದಿದೆ.
ಸಾಂದರ್ಭಿಕ ಚಿತ್ರ
ಡಿ. 3 ರ ಸಂಜೆ 6.30ಕ್ಕೆ ಅಪಹರಣ ನಡೆದಿದ್ದು, ಹಾಂಕಾಂಗ್ ಮೂಲದ ಆ್ಯಂಗ್ಲೊಈಸ್ಟರ್ನ್ ಟ್ಯಾಂಕರ್ ಮ್ಯಾನೇಜ್ಮೆಂಟ್ ಕಂಪನಿಗೆ ಸೇರಿದ ಹಡಗಗು ನೈಜೀರೊಯಾದ ಬೊನ್ನಿ ಆಫ್ಷೋರ್ ಟರ್ಮಿನಲ್ನಿಂದ ಹೊರಟಿತ್ತು. ಹಡಗಿನಲ್ಲಿದ್ದ ತೈಲವನ್ನು ದೋಚುವ ಸಲುವಾಗಿ ಕಡಲ್ಗಳ್ಳರು ಅದರಲ್ಲಿದ್ದ ಭಾರತೀಯರ ಅಧಿಕಾರಿಗಳನ್ನು ಅಪಹರಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮರ್ಚೆಂಟ್ ನೇವಿ ಯ ಎಂಜಿನಿಯರ್ ಆಗಿರುವ ವಿಜಯ್ ತಿವಾರಿ ಮತ್ತು ಅವರ ಪತ್ನಿ ಅಂಜು ಅದೇ ಹಡಗಿನಲ್ಲಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಕಡಲ್ಗಳ್ಳರು ಹಡಗಿಗೆ ಹತ್ತುವ ಮುಂಚೆ ತಪ್ಪಿಸಿಕೊಳ್ಳಲಾಗದ 19 ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಲು ಯಶಸ್ವಿಯಾಗಿದ್ದರು.
ಸದ್ಯ ಹಡಗು ಈಗ ಸುರಕ್ಷಿತವಾಗಿದೆ ಮತ್ತು ನೈಜೀರಿಯಾ ನೌಕಾಪಡೆಯ ಬೆಂಗಾವಲಿನಲ್ಲಿದೆ ಎಂದು ಹೇಳಲಾಗುತ್ತದೆಯಾದರೂ ಈ ಬಗ್ಗೆ ಸ್ಪಷ್ಟತೆ ಇಲ್ಲ