ಲಂಡನ್,ಡಿ 10 (Daijiworld News/MSP): ಕ್ಯಾನ್ಸರ್ ನಿಂದ ನಾಲಿಗೆಯನ್ನು ಕಳೆದುಕೊಂಡ ಯುಕೆ ಮೂಲದ 36 ವರ್ಷದ ಮಹಿಳೆಯೊಬ್ಬಳಿಗೆ ಆಕೆಯ ತೋಳಿನ ಭಾಗದಿಂದ "ಹೊಸ ನಾಲಿಗೆ"ಯನ್ನು ಸೃಷ್ಟಿಸಿಕೊಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಬಕಿಂಗ್ ಹ್ಯಾಂಶೈರ್’ನ ಐಲೆಸ್ಬರಿ ಮೂಲದ ಸ್ಟೆಫನಿ ವಿಗೆಲ್ಸ್ ವರ್ಥ್ ಎಂಬ ಮಹಿಳೆಯ ಬಾಯಿ, ನಾಲಿಗೆಯಲ್ಲಿ ಮೊದಮೊದಲು ಸಣ್ಣ ಹುಣ್ಣುಗಳು ಕಾಣಿಸಿಕೊಂಡು ಕ್ರಮೇಣ ನಾಲಿಗೆ ನಿಶ್ಚೇತವಾಗಲು ಪ್ರಾರಂಭಿಸಿತು. ವೈದ್ಯಕೀಯ ಪರೀಕ್ಷೆಗೊಳಪಟ್ಟಾಗ ಸ್ಟೆಫನಿಗೆ ಕ್ಯಾನ್ಸರ್ ಇರುವುದು ದೃಢವಾಯಿತು. ಸ್ಟೆಫನಿ ಅಘಾತಗೊಂಡು ಕುಸಿದುಹೋದಳು.
ಚಿಕಿತ್ಸೆಯು ಸಮಯದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಅನಿವಾರ್ಯವೆಂದು ಸ್ಟೆಫನಿ ಗೆವೈದ್ಯರು ಮನವರಿಕೆ ಮಾಡಿದರು. ಕ್ಯಾನ್ಸರ್ ಪೀಡಿತ ನಾಲಿಗೆಯ ಅರ್ಧದಷ್ಟು ಭಾಗವನ್ನು ಕತ್ತರಿಸಲು ಆರು ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ಮಾಡಲಾಯಿತು. ನಾಲಿಗೆ ಮೂಲಕ್ಕೆ ತಲುಪಲು ವೈದ್ಯರು ಅವಳ ಕುತ್ತಿಗೆಯ ಮೂಲಕ ನಾಲಿಗೆ ಕತ್ತರಿಸಬೇಕಾಗಿರುವುದರಿಂದ ಶಸ್ತ್ರಚಿಕಿತ್ಸೆಗಳಿಗೆ ನಾಜೂಕು ಹಾಗೂ ನಿಖರತೆಯ ಅಗತ್ಯವಿತ್ತು. ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ ಅರ್ಧಕ್ಕೂ ಹೆಚ್ಚು ಭಾಗ ನಾಲಿಗೆಯನ್ನು ಬೇರ್ಪಡಿಸಿ ತೆಗೆದುಹಾಕಲಾಯಿತು. ಆದರೆ ಸ್ಟೆಪನಿ ನಾಲಿಗೆ ಕಳೆದುಕೊಂಡರೂ ಮತ್ತೆ ಮಾತನಾಡುವ ’ಭರವಸೆ’ ಕಳೆದುಕೊಳ್ಳಲಿಲ್ಲ..!
ವೈದ್ಯರು ಸ್ಟೆಫನಿಗಾಗಿ ಹೊಸ ನಾಲಿಗೆ ಸೃಷ್ಟಿಸಲು ಪಣತೊಟ್ಟು ಯಶಸ್ವಿಯಾದರು. ತೋಳಿನಿಂದ ಸ್ವಲ್ಪ ಚರ್ಮ, ರಕ್ತನಾಳ ಮತ್ತು ಸ್ವಲ್ಪ ಸ್ನಾಯುಗಳನ್ನು ತೆಗೆದುಕೊಂಡು ಹೊಸ ನಾಲಿಗೆಯನ್ನು 'ಮರುಸೃಷ್ಟಿಸಿದರು'. ಸದ್ಯ ಸ್ಟೆಫನಿ ಕಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದು ಸ್ಟ್ರಾ ಮೂಲಕ ಆಹಾರ ಸೇವಿಸುತ್ತಿದ್ದು ಮತ್ತೆ ಮಾತನಾಡುವ ಪ್ರಯತ್ನದಲ್ಲಿದ್ದಾರೆ.
" ನನ್ನ ತೋಳಿನಿಂದ ಸ್ನಾಯು ಚರ್ಮವನ್ನು ತೆಗೆದಾಗ , ಅದು ನನ್ನ ಬಾಯಿಗಿಂತ ಹೆಚ್ಚು ನೋವುಂಟುಮಾಡಿದೆ, ಆದರೆ ನಾನು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿದ್ದು , ನನ್ನ ಹಳೆಯ ಧ್ವನಿ ವಾಪಾಸು ಪಡೆಯಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದೇನೆ". 2013 ರಲ್ಲಿ ಮೊದಲ ಬಾರಿ ನಾಲಿಗೆ ಹುಣ್ಣು ಕಾಣಿಸಿಕೊಂಡು ಮರುಕಳಿಸಲಾರಂಭಿಸಿತು. ಮೊದಲು ಪರೀಕ್ಷಿಸಿದಾಗ ಟ್ರಸಿಸ್ಟ್ ಇಸ್ಕೆಮಿಕ್ ಅಟ್ಯಾಕ್ (ಟಿಐಎ) ಯಿಂದ ಬಳಲುತ್ತಿದ್ದೇನೆ ಎಂದು ತಿಳಿಸಲಾಯಿತು. ಆ ಬಳಿಕ ಕ್ಯಾನ್ಸರ್ ಧೃಡವಾಯಿತು. ಪತಿ ಗ್ಯಾರಿಯಿಂದ ಕಾಳಜಿಯಿಂದ ಕ್ಯಾನ್ಸರ್ ಗೆಲ್ಲಲು ಸಹಾಯವಾಯಿತು. "ನಾನು ಧೂಮಪಾನಿ, ಹಾಗಾಗಿ ನಾನು ಈ ನೋವಿಗೆ ಅರ್ಹಳೆಂದು ಭಾವಿಸಿದ್ದೇನೆ, ಆದರೆ ನನ್ನ ತಪ್ಪನ್ನು ನನ್ನ ಮಕ್ಕಳು ನೆನಪಿನಲ್ಲಿಟ್ಟುಕೊಳ್ಳಲು ನಾನು ಬಯಸುತ್ತೇನೆ " ಎನ್ನುತ್ತಾರೆ ಸ್ಟೆಫನಿ.