ಲಂಡನ್, ಡಿ 12(Daijiworld News/MSP): ಟಿವಿ ಸಂದರ್ಶನಕ್ಕಾಗಿ ಪತ್ರಕರ್ತ ಕೇಳಿದ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರೀಡ್ಜ್ ಒಳಕ್ಕೆ ನುಗ್ಗಿದ ವಿಡಿಯೋ ವೈರಲ್ ಆಗಿದೆ .
ಬುಧವಾರ ಯಾರ್ಕ್ಷೈರ್ನಲ್ಲಿರುವ ’ಮಾರ್ಡನ್ ಮಿಲ್ಕ್ ಮ್ಯಾನ್ ’ ವ್ಯಾಪಾರ ಪ್ರದೇಶಕ್ಕೆ ಮುಂಜಾನೆ ಭೇಟಿಕೊಟ್ಟಾಗ ಅಲ್ಲಿ ’ಗುಡ್ ಮಾರ್ನಿಂಗ್ ಬ್ರಿಟನ್ ’ ವರದಿಗಾರ ಜೊನಾಥನ್ ಸ್ವೈನ್ ಅವರಿಗೆ ಪ್ರಧಾನಿ ಬೋರಿಸ್ ಮುಖಾಮುಖಿಯಾದಾಗ ಈ ಘಟನೆ ನಡೆದಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.
ಈ ವಿಡಿಯೋ ಇದೀಗ ಸಿಕ್ಕಪಟ್ಟೆ ವೈರಲ್ ಆಗಿದ್ದು, ಸಂದರ್ಶನಕ್ಕೆಂದು ಪತ್ರಕರ್ತ ಜೋನಾಥನ್ ಚಾನೆಲ್ ಗೆ ಬರುವಂತೆ ಆಹ್ವಾನಿಸಿದ್ದಕ್ಕೆ "ನಾನು ಒಂದು ನಿಮಿಷದಲ್ಲಿ ನಿಮ್ಮೊಂದಿಗೆ ಇರುತ್ತೇನೆ" ಎಂದು ಹೇಳಿದವರು ನೇರವಾಗಿ ಪ್ರಿಡ್ಜ್ ಒಳಗೆ ನುಗ್ಗಿದ್ದಾರೆ. ಅಷ್ಟೇ ಅಲ್ಲ ಹಾಲು ಮಾರುವ ವ್ಯಕ್ತಿಯ ಬಗ್ಗೆ ಪ್ರಧಾನಿ ಬೆಂಬಲಿಗನೊಬ್ಬ ಆಡಿದ ಅಶ್ಲೀಲ ಮಾತು ಕೂಡಾ ಅವರ ಅತಿರೇಕವೆನಿಸಿದೆ. ಮಾತ್ರವಲ್ಲದೆ ಹಾಲಿನ ಬಾಟಲಿಗಳೊಂದಿಗೆ ಜೋಡಿಸಲಾದ ಫ್ರೀಜರ್ಗೆ ಯುಕೆ ಪಿಎಂ ಹೋಗಿ ಕಣ್ಮರೆಯಾಗುತ್ತಿದ್ದಾರೆ ಎನ್ನುವ ಆಡಿಯೋ ಕೂಡಾ ಈ ದೃಶ್ಯದಲ್ಲಿ ದಾಖಲಾಗಿದೆ.
ದೃಶ್ಯ ಆನ್ ಲೈನ್ ನಲ್ಲಿ ವೈರಲ್ ಆಗಿದ್ದು ಜವಾಬ್ದಾರಿಯುತ ಪ್ರಧಾನಿ ಚುನಾವಣೆ ಸಂದರ್ಭದಲ್ಲಿ ತೋರಿರುವ ಈ ನಿರ್ಲಕ್ಷ ದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. "ಕಳೆದ ಆರು ವಾರಗಳಿಂದ ಸಂದರ್ಶನಕ್ಕೆ ಬರುವಂತೆ ಪ್ರತಿ ದಿನವೂ ಮನವಿ ಮಾಡಿಕೊಳ್ಳುತ್ತಿದ್ದೇವೆ ಆದರೆ ತಪ್ಪಿಸಿಕೊಳ್ಳುತ್ತಿದ್ದಾರೆ" ಎಂದು ಜೋನಾಥನ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಯೊಂದರ ನೆಲದ ಮೇಲೆ ಮಲಗಿದ್ದ ಮಗುವನ್ನು ನೋಡದೆ ನಿರ್ಲಕ್ಷ್ಯವಹಿಸಿದ ಪೊಟೋ ಸೆರೆಹಿಡಿದಕ್ಕಾಗಿ ಪತ್ರಕರ್ತನ ಫೋನ್ ಕಿತ್ತುಕೊಂಡು ಜೇಬಿಗೆ ಹಾಕಿದ ಆರೋಪವನ್ನು ಬ್ರಿಟಿಷ್ ಪ್ರಧಾನಿ ಜಾನ್ಸನ್ ಮೇಲಿತ್ತು. ಇದರ ಬೆನ್ನಲ್ಲೇ ತನ್ನ ವಿಚಿತ್ರ ವರ್ತನೆಯಿಂದ ಮತ್ತೆ ಸುದ್ದಿಗೊಳಗಾಗಿದ್ದಾರೆ.