ಲಂಡನ್, ಡಿ 12(Daijiworld News/MSP): ತನ್ನ ಬಳಿಗೆ ಬರುತ್ತಿದ್ದ ಕ್ಯಾನ್ಸರ್ ಪೀಡಿತ ಮಹಿಳಾ ರೋಗಿಗಳಿಗೆ ಕ್ಯಾನ್ಸರ್ ಬಗೆಗಿರುವ ಭಯವನ್ನೇ ಬಂಡವಾಳವನ್ನಾಗಿಸಿಕೊಂಡು ಮಹಿಳೆಯರ ಗುಪ್ತಾಂಗ ಪರೀಕ್ಷಿಸುವ ಮೂಲಕ ಕಿರುಕುಳ ನೀಡುತ್ತಿದ್ದ ಭಾರತೀಯ ಮೂಲದ ವೈದ್ಯನನ್ನು ಯುಕೆ ನ್ಯಾಯಾಲಯವೂ ದೋಷಿ ಎಂದು ತೀರ್ಪು ನೀಡಿದೆ.
ಪೂರ್ವ ಲಂಡನ್ ನ ಮೇವ್ನೇ ಮೆಡಿಕಲ್ ಸೆಂಟರ್ ನಲ್ಲಿ ವೈದ್ಯಕೀಯ ವೃತ್ತಿಯನ್ನು ನಿರ್ವಹಿಸುತ್ತಿದ್ದ ಮನೀಶ್ ಶಾ ರೋಗಿಗಳ ಮನವೊಲಿಸಲು ಹಾಲಿವುಡ್ ತಾರೆ ಏಂಜಲೀನಾ ಜೋಲೀ ಕ್ಯಾನ್ಸರ್ ಪ್ರಕರಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಮಹಿಳಾ ರೋಗಿಗಳು ತಪಾಸಣೆಗೆ ಬರುವ ವೇಳೆ ಏಂಜಲೀನಾ ಜೋಲೀ ಕ್ಯಾನ್ಸರ್ ಪ್ರಕರಣವನ್ನು ವಿವರಿಸಿ ಮಹಿಳಾ ರೋಗಿಗಳಿಗೆ ಸ್ತನ ಪರೀಕ್ಷೆ ನಡೆಸಿಕೊಳ್ಳುವಂತೆ ಪ್ರೇರಿಸುತ್ತಿದ್ದ. ಏಂಜಲೀನಾ ಜೋಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಮ್ಯಾಸ್ಟೆಕ್ಟಮಿ ಮಾಡಿಸಿಕೊಂಡಿರುವುದನ್ನು ಹೇಳಿ ನೀವೂ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದ. ಕ್ಯಾನ್ಸರ್ ಬಗ್ಗೆ ಭಯಗೊಂಡು ಸ್ತನ ಪರೀಕ್ಷೆಗೆ ಒಪ್ಪಿದ ಮಹಿಳೆಯರಿಗೆ ಸ್ತನ ಪರೀಕ್ಷೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಹೀಗೆ 23 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವೈದ್ಯ ಮನೀಶ್ ಶಾ ಎಂಬಾತನು ಅಪರಾಧಿ ಎಂದು ಲಂಡನ್ನ ಓಲ್ಡ್ ಬೈಲಿ ನ್ಯಾಯಾಲಯ ಹೇಳಿದೆ. ಸ್ತನ ಪರೀಕ್ಷೆಯ ನೆಪದಲ್ಲಿ ಮಹಿಆಳ್ ರೋಗಿಯ ಗುಪ್ತಾಂಗಗಳನ್ನು ಪರೀಕ್ಷೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ವೈದ್ಯಕೀಯವಾಗಿ ಅಂತಹ ಪರೀಕ್ಷೆ ನಡೆಸಬೇಕಾದ ಅಗತ್ಯವೇ ಇಲ್ಲ ಎಂದು ಪ್ಯಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು . ಮೇ 2009 ಮತ್ತು ಜೂನ್ 2013 ರ ನಡುವೆ ಶಾ ಪೂರ್ವ ಲಂಡನ್ನ ಮಾವ್ನಿ ವೈದ್ಯಕೀಯ ಕೇಂದ್ರದ ಆರು ರೋಗಿಗಳ ಮೇಲೆ ಹಲ್ಲೆ ನಡೇಸಿದ್ದ. ಅದರಲ್ಲಿ 11 ರ ಅಪ್ರಾಪ್ತೆಯೂ ಸೇರಿದ್ದಾಳೆ. ಅಲ್ಲದೆ ಬೇರೆಡೆ ಆತ 17 ಮಹಿಳೆಯರ ಮೇಲೆ ಇದೇ ಬಗೆಯಲ್ಲಿ ಅತ್ಯಾಚಾರ ಯತ್ನ ನಡೆಸಿದ್ದಾನೆ. ಇದೀಗ ನ್ಯಾಯಾಲಯ ಶಾ ಅಪರಾಧಿ ಎಂದು ತೀರ್ಪು ನೀಡಿದ್ದು ನ್ಯಾಯಾಧೀಶ ಅನ್ನಿ ಮೊಲಿನ್ಯೂಕ್ಸೆ ಪೆಬ್ರವರಿ 7, 2020ರಂದು ಶಿಕ್ಷೆ ಪ್ರಮಾಣವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.