ಲಂಡನ್, ಡಿ 13(Daijiworld News/MSP): ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಹೊಸ ದಾಖಲೆಯೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿದಿದೆ. ಭಕನ್ಸರ್ವೇಟಿವ್ ಪಕ್ಷ ರ್ಜರಿ ಜಯ ಸಾಧಿಸಿದ್ದು, ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಮತಗಟ್ಟೆ ಸಮೀಕ್ಷೆಗಳು ಕನ್ಸರ್ವೇಟಿವ್ ಪಕ್ಷದ ಗೆಲುವಿನ ಮುನ್ಸೂಚನೆ ನೀಡಿತ್ತು. ಅವಧಿಗೆ ಮುನ್ನ ನಡೆದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಫಲಿತಾಂಶದ ಅನ್ವಯ 650 ಸ್ಥಾನಗಳ ಪೈಕಿ 600 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು ಕನ್ಸರ್ವೇಟಿವ್ ಪಕ್ಷ 360ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿದೆ. ಹೀಗಾಗಿ ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಕೆ ಮಾಡಿದ್ರೆ ಕನ್ಸರ್ವೇಟಿವ್ ಪಕ್ಷ 43 ಹೆಚ್ಚುವರಿ ಸ್ಥಾನಗಳನ್ನು ಪಡೆದುಕೊಂಡಿದೆ.
ಈ ಚುನಾವಣೆಯಲ್ಲಿ ‘ಬ್ರೆಕ್ಸಿಟ್’ ಘೋಷಣೆಯೊಂದಿಗೆ ಅಂದರೆ ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಬೇರ್ಪಡೆಯಾಗುವುದು ಪ್ರಮುಖ ವಿಚಾರವಾಗಿತ್ತು. ಹೀಗಾಗಿ "ಗೆಟ್ ಬ್ರೆಕ್ಸಿಟ್ ಡನ್" ಘೋಷಣೆಯೊಂದಿಗೆ ಚುನಾವಣೆಗೆ ಧುಮುಕಿದ್ದ ಪ್ರಧಾನಿ ಬೋರಿಸ್ ಜಾನ್ಸನ್ ಹಾದಿ ಸುಗಮವಾದಂತಾಗಿದೆ. ಬ್ರೆಕ್ಸಿಟ್ ಗೆ ವಿರೋಧವಾಗಿದ್ದ ಲೇಬರ್ ಪಾರ್ಟಿ ಹೀನಾಯ ಸೋಲು ಕಂಡಿದೆ.