ಲಂಡನ್, ಡಿ 16 (Daijiworld News/MB) : ಮಾಜಿ ಫಾರ್ಮುಲಾ ಒನ್ ಬಾಸ್ ಬರ್ನಿ ಎಕ್ಲೆಸ್ಟೋನ್ ಅವರ ಪುತ್ರಿ ಸೆಲೆಬ್ರಿಟಿ ತಮಾರಾ ಎಕ್ಲೆಸ್ಟೋನ್ ಅವರ ಮನೆಯಿಂದ ಸುಮಾರು 470 ಕೋಟಿ ಮೌಲ್ಯದ ಆಭರಣಗಳು ಕಳವಾಗಿದೆ.
ತಮಾರಾ ಕ್ರಿಸ್ಮಸ್ ರಜಾದ ಸಲುವಾಗಿ ವಿದೇಶಕ್ಕೆ ತೆರಳಿದ್ದು ಕಳ್ಳರು ಶುಕ್ರವಾರ ರಾತ್ರಿ ಹೈಡ್ ಪಾರ್ಕ್ ಪಕ್ಕದ ಆಕೆಯ ಮನೆಯಲ್ಲಿದ್ದ ಎಲ್ಲಾ ಆಭರಣಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಕಳ್ಳರು ಗಾಡರ್ನ್ ಮುಖೇನ ತಮಾರ ಹಾಗೂ ಆಕೆಯ ಪತಿ ಜೇ ರುಟ್ಲ್ಯಾಂಡ್ ಅವರ ಕೋಣೆಗೆ ನುಗ್ಗಿದ್ದಾರೆ ಎಂದು ಹೇಳಲಾಗಿದೆ.
ಆಕೆಯ ಉಂಗುರಗಳು, ಕಿವಿಯೋಲೆಗಳು, ಬಳೆ ಹಾಗೆಯೇ ಆಕೆಯ ಮದುವೆಗೆ ದೊರೆತ ಉಡುಗೊರೆಗಳನ್ನು ಕಳ್ಳರು ದೋಚಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಈ ಕುರಿತು ಮಾತಾನಾಡಿದ ಎಕ್ಲೆಸ್ಟೋನ್ ವಕ್ತಾರರು "ಈ ಮನೆಗೆ ಆಕ್ರಮಣ ಮಾಡಲಾಗಿದೆ ಎಂದು ವಿಷಾದದಿಂದ ಖಚಿತ ಪಡಿಸುತ್ತೇನೆ. ಈ ಪ್ರಕರಣದ ತನಿಖೆಗೆ ಆಂತರಿಕ ಭದ್ರತೆಯವರು ಪೊಲೀಸರಿಗೆ ಸಹಕಾರ ಮಾಡುತ್ತಿದ್ದಾರೆ " ಎಂದು ತಿಳಿಸಿದ್ದಾರೆ.
ದರೋಡೆ ನಡೆದ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.