ವಾಷಿಂಗ್ಟನ್, (Daijiworld News/MSP) : ಸುಮಾರು 180 ಪ್ರಯಾಣಿಕರು ಸೇರಿದಂತೆ ಸಿಬ್ಬಂದಿಗಳನ್ನು ಹೊತ್ತು ಸಾಗುತ್ತಿದ್ದ ಉಕ್ರೇನ್ ನ ವಿಮಾನ ಭೀಕರ ಅಪಘಾತಕ್ಕೀಡಾಗಿ ಅದರಲ್ಲಿದ್ದ ಎಲ್ಲಾ ಪ್ರಯಾಣಿಕರ ಸಾವಿಗೆ ಕಾರಣಗಿರುವ ಘಟನೆಗೆ ಪ್ರತಿಕ್ರಿಯಿಸಿರುವ ಅಮೆರಿಕಾದ ಅಧಿಕಾರಿಗಳು, ಇರಾನ್ ನ ವಿಮಾನವನ್ನು ತಪ್ಪಿ ಹೊಡೆದುರುಳಿಸಿರಬಹುದು ಹೊರತು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿರಲಿಕ್ಕಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ದೇಶದ ಅಂತಾರಾಷ್ಟ್ರೀಯ ಬೋಯಿಂಗ್ 737-800 ವಿಮಾನ ರಷ್ಯಾದ ಕೀವ್ ಎಂಬಲ್ಲಿಗೆ ಹೊರಟಿತ್ತು. ಇರಾನ್ ದೇಶದ ಟೆಹ್ರಾನ್ನ ವಿಮಾನ ನಿಲ್ದಾಣದಲ್ಲಿ ಇಳಿದು ಬಳಿಕ ಮತ್ತೆ ಪ್ರಯಾಣ ಮುಂದುವರಿಸಿದ ಹೊರಟ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿತ್ತು.
ಈ ವಿಮಾನ ಅಪಘಾತದಲ್ಲಿ ಕನಿಷ್ಠ 63 ಮಂದಿ ಕೆನಡಾದ ಪ್ರಜೆಗಳು ಮೃತಪಟ್ಟಿದ್ದರು. ಮೇಲ್ಮೈ ವಾಯು ಕ್ಷಿಪಣಿ ದಾಳಿಯಿಂದ ವಿಮಾನ ಅಪಘಾತಕ್ಕೀಡಾಗಿರಬಹುದೆ ಹೊರತು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿರಲಿಕ್ಕಿಲ್ಲ ಎಂದು ಹೇಳಿದ್ದರು.
ಇರಾನ್ ಸೇನಾಧಿಕಾರಿ ಖಾಸಿಂ ಸೊಲೈಮಾನಿಯನ್ನು ಹತ್ಯೆಗೈದ ಅಮೆರಿಕಾ ಸೇನಾ ನೆಲೆ ಮೇಲೆ ಪ್ರತೀಕಾರವಾಗಿ ಇರಾನ್ ಕ್ಷಿಪಣಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ನ ವಿಮಾನ ಅಪಘಾತಕ್ಕೀಡಾಗಿತ್ತು.
ತಾಂತ್ರಿಕ ಸಮಸ್ಯೆಯಿಂದ ವಿಮಾನ ಅಪಘಾತವಾಗಿದೆ ಎಂದು ಆರಂಭದಲ್ಲಿ ಹೇಳಲಾಗುತ್ತಿದ್ದರೂ, ಇರಾನ್ ನೆಲದಲ್ಲಿ ಉಕ್ರೇನ್ ವಿಮಾನ ನೆಲಕ್ಕುರುಳಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು.