ಲಂಡನ್, ಜ 11 (Daijiworld News/MB) : ತಾನು 16 ವರ್ಷದ ಹುಡುಗನಂತೆ ವೇಷ ಧರಿಸಿ 50ಕ್ಕೂ ಅಧಿಕ 13 ವರ್ಷದೊಳಗಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 21 ವರ್ಷದ ಯುವತಿಗೆ ಎಂಟು ವರ್ಷಗಳ ಕಾಲ ಜೈಲುಶಿಕ್ಷೆ ನೀಡಲಾಗಿದೆ.
21 ವರ್ಷದ ಗೆಮ್ಮಾ ವಾಟ್ಸ್ ಎಂಬ ಯುವತಿ ದುರ್ಬಲ ಹುಡುಗಿಯರನ್ನೇ ಗುರಿಯಾಗಿಸಿಕೊಂಡಿದ್ದು ಲೈಂಗಿಕ ಕಿರುಕುಳ ನೀಡುತ್ತಿದ್ದು ತನ್ನ ಹೆಸರನ್ನು ಜೇಕ್ ವಾಟನ್ ಎಂದು ಹೇಳಿಕೊ೦ಡು ಸುಮಾರು 50ಕ್ಕೂ ಅಧಿಕ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು ಈ ಕುರಿತು ದೂರು ನೀಡಲು ಮುಂದೆ ಬರುವಂತೆ ವಾಟ್ಸ್ನಿಂದ ವಂಚನೆಗೆ ಒಳಗಾದವರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.
ಉತ್ತರ ಲಂಡನ್ನ ಎನ್ಫೀಲ್ಡ್ನಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ ವಾಟ್ಸ್, ಸಂತ್ರಸ್ಥರಿಗೆ ಇನ್ಸ್ಟಾಗ್ರಾಂ ಹಾಗೂ ಸ್ನಾಪ್ ಚಾಟ್ ಮುಖೇನ ಲೈಕ್ ಕೊಟ್ಟು ಸಂದೇಶಗಳನ್ನು ಕಳುಹಿಸಿ ಅವರಿಗೆ ಅಡ್ಡ ಹೆಸರಿಟ್ಟು ಕರೆದು ಹತ್ತಿರವಾಗುತ್ತಿದ್ದಳು.
ಹಾಗೆಯೇ ಈ ಬಾಲಕಿಯರನ್ನು ಭೇಟಿಯಾಗುವ ಸಂದರ್ಭದಲ್ಲಿ ತನ್ನ ಉದ್ದನೆಯ ಕೂದಲನ್ನು ಮೇಲೆ ಕಟ್ಟಿ ಅದರ ಮೇಲೆ ಕ್ಯಾಪ್ ಧರಿಸಿ ಅವರನ್ನು ತಾನು ಜೇಕ್ ಎಂದು ನಂಬಿಸುತ್ತಿದ್ದಳು. ಹಾಗೆಯೇ ಎಷ್ಟೋ ಭಾರಿ ವಾಟ್ಸ್ ಹುಡುಗಿಯರ ಪೋಷಕರೊಂದಿಗೆ ತುಂಬಾ ಹೊತ್ತು ಮಾತನಾಡಿದ್ದಳು.
ತನ್ನನ್ನು ಬಂಧಿಸಿದ ನಂತರ ವಾಟ್ಸ್ ಪೊಲೀಸರಿಗೆ, "ನಾನು ಇದನ್ನು ಆಟದಂತೆ ನೋಡುತ್ತಿದ್ದೆ. ನಾನು ಅವರನ್ನು ಹುರಿದುಂಬಿಸಲು ಮಾತ್ರ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.
ಈ ಕುರಿತು ಮಾತನಾಡಿದ ನ್ಯಾಯಾಧೀಶ ಸುಸಾನ್ ಇವಾನ್ಸ್, " ವಾಟ್ಸ್ ಮಾಡಿರುವ ಈ ಕೃತ್ಯದ ಹಿಂದೆ ದೊಡ್ಡ ಸಂಚಿದೆ. ಅವಳ ಈ ನಡವಳಿಕೆ ಆಕ್ಷೇ#ಪಾರ್ಹ. ಈಕೆಯಿಂದ ದೌರ್ಜನ್ನಯಕ್ಕೆ ಒಳಗಾದ ಬಾಲಕಿಯರು ಹೆಚ್ಚಾಗಿ ದುರ್ಬಲರಾಗಿದ್ದು ಈ ಘಟನೆಯಿಂದ ಆತ್ಮಸ್ಥರ್ಯವನ್ನು ಕಳೆದು ಕೊಂಡಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿದ ಬಳಿಕವೂ ಆಕೆ ಹಲವು ಹುಡುಗಿಯರನ್ನು ಬೇಟಿ ಮಾಡಿ ಮೋಸ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.
ವಾಟ್ಸ್ ಕಡಿಮೆ ಬುದ್ಧಿ ಶಕ್ತಿ ಹೊಂದಿದ್ದು ಪ್ರಬುದ್ಧಳಾಗಿಲ್ಲ. ಆಕೆಗೆ ತನ್ನ ಲೈಂಗಿಕತೆಯ ಬಗ್ಗೆ ಸಮಸ್ಯೆಗಳಿದ್ದವು. ಹಾಗೆಯೇ ಕೆಲವರು ತೀವ್ರ ಮಾನಸಿಕ ಹಿಂಸೆ ಅನುಭವಿಸಿದ್ದಾರೆ.
ಹುಡುಗಿಯರು ಆಕೆಗೆ ಸ್ಥನವಿರುವುದರ ಬಗ್ಗೆ ಪ್ರಶ್ನೆ ಮಾಡಿದಾಗ, ಅತೀ ಹೆಚ್ಚು ತೂಕವಿರು ಪರಿಣಾಮ ಮಹಿಳೆಯರಂತೆ ನನಗೂ ಸ್ಥನವಿದೆ ಎಂದು ಹೇಳುತ್ತಿದ್ದು ತಾನು ಮಹಿಳೆಯರ ಬಟ್ಟೆ ಧರಿಸಿದರೆ ಹೇಗೆ ಕಾಣುತ್ತೇನೆ ಎಂದು ನೋಡಲು ಮಹಿಳೆಯರ ಬಟ್ಟಯನ್ನು ಧರಿಸುವುದಾಗಿ ಹೇಳಿಕೊಳ್ಳುತ್ತಿದ್ದಳು. ಹಾಗೆಯೇ ಹುಡುಗಿಯರನ್ನು ವಾಹನಗಳೆಡೆಗೆ ತಳ್ಳಿ ಹಾಗೂ ಚಾಕು ತೋರಿಸಿ ಜೀವ ಬೆದರಿಕೆ ಹಾಕುತ್ತಿದ್ದಳು.