ನ್ಯೂಯಾರ್ಕ್, ಜ 13 (Daijiworld News/MSP): ಭಾರತ ಮೂಲದ ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಧ್ಯಾಪಕ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಹಾಸ್ಯದಿಂದ ಕೆಲಸ ಕಳೆದುಕೊಂಡಿದ್ದಾರೆ.
ಇರಾನ್-ಅಮೆರಿಕಾ ನಡುವಿನ ಸಂಘರ್ಷದ ಬಗ್ಗೆ ಜೋಕ್ಸ್ ಒಂದನ್ನು ಪೋಸ್ಟ್ ಮಾಡಿದ್ದ ಪ್ರಾಧ್ಯಾಪಕ ಅಶೀನ್ ಫನ್ಸೆ ಕಾಲೇಜಿನ ಘನತೆಗೆ ಧಕ್ಕೆ ತರುವಂತೆ ಫೇಸ್ ಬುಕ್ ಪೋಸ್ಟ್ ಹಾಕಿರುವುದಕ್ಕೆ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಮೇರಿಕಾದ ಬ್ಯಾಬ್ಸನ್ ಕಾಲೇಜು ಸ್ಪಷ್ಟಪಡಿಸಿದೆ.
ಇರಾನ್ ನ ಸಾಂಸ್ಕೃತಿಕವಾಗಿ ಸ್ಥಳಗಳ ಮೇಲೆ ದಾಳಿ ನಡೆಸಲಾಗುವುದು ಎಂಬ ಡೊನಾಲ್ಡ್ ಟ್ರಂಪ್ ಟ್ವೀಟ್ಗೆ ಸಂಬಂಧಿಸಿದಂತೆ ಇರಾನ್ ಕೂಡ ಮಾಲ್ ಆಫ್ ಅಮೆರಿಕಾ, ಕರ್ದಾಶಿಯನ್ಸ್ ಮನೆಗಳಂತೆ ಅಮೆರಿಕಾದ 52 ಕೇಂದ್ರಗಳನ್ನು ದಾಳಿಗೆ ಗುರುತಿಸಬೇಕು ಎಂದು ಫೇಸ್ ಬುಕ್ ನಲ್ಲಿ ಹಾಸ್ಯತ್ಮಕ ಪೋಸ್ಟ್ ಮಾಡಿದ್ದರು.
ಕಳೆದ ವಾರ ಹಾಕಿದ್ದ ಪೋಸ್ಟ್ ಗೆ ಪ್ರಾಧ್ಯಾಪಕ ಅಶೀನ್ ಫನ್ಸೆ ಕ್ಷಮೆಯಾಚಿಸಿದ್ದು,ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಬಹುದು ಕಾಲೇಜು ಬೆಂಬಲಿಸಬಹುದು ಎಂದುಕೊಂಡಿದ್ದೆ ಆದರೆ ನಾನು ಮಾಡಿದ ಹಾಸ್ಯವನ್ನು ಬೆದರಿಕೆಯಂತೆ ಪರಿಗಣಿಸಲಾಗಿದೆ' ನನ್ನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾಲೇಜು, ಹಿಂಸೆ,ಧ್ವೇಷವನ್ನು ಉತ್ತೇಜಿಸುವ ಬೆದರಿಕೆ ಮಾತುಗಳು, ಅಥವ ಅಂತಹ ಕೆಲಸಗಳನ್ನು ಖಂಡಿಸುತ್ತದೆ,” ಎಂದು ಹೇಳಿ ಕೆಲಸದಿಂದ ವಜಾಗೊಳಿಸಿದೆ.