ವಾಷಿಂಗ್ಟನ್, ಜ.14 (Daijiworld News/PY) : ಒಂದು ಕಟ್ಟಡದ ಛಾವಣಿಯಿಂದ ಮತ್ತೊಂದು ಕಟ್ಟಡದ ಛಾವಣಿ ಹಾರಲು ಹೋಗಿ ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮೆರಿಕದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ವಿವೇಕ್ ಸುಬ್ರಮಣಿ(23) ಗುರುತಿಸಲಾಗಿದೆ.
ವಿವೇಕ್ ಸುಬ್ರಮಣಿ ಡ್ರೆಕ್ಸೆಲ್ ಮೆಡಿಕಲ್ ಕಾಲೇಜಿನಲ್ಲಿ ವಿವೇಕ್ ಮೂರನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದನು. ಫಿಲಡೆಲ್ಫಿಯಾದಲ್ಲಿ ಒಂದು ಕಟ್ಟಡದ ಛಾವಣಿಯಿಂದ ಮತ್ತೊಂದು ಕಟ್ಟಡ ಛಾವಣಿಗೆ ಜಿಗಿಯಲು ಹೋಗಿ ಸಾವನ್ನಪ್ಪಿದ್ದಾನೆ.
ಜ. 11ರ ಶನಿವಾರ ರಾತ್ರಿ ಸುಬ್ರಮಣಿ ಹಾಗೂ ಆತನ ಇಬ್ಬರು ಸ್ನೇಹಿತರು ತಾವು ವಾಸವಿದ್ದ ಅಪಾರ್ಟ್ಮೆಂಟ್ನ ಛಾವಣಿಯಿಂದ ಜಿಗಿಯುವಾಗ ಈ ಘಟನೆ ನಡೆದಿದೆ. ಘಟನೆ ನಡೆಯುವ ಮುನ್ನ ಸಂಜೆ ಮೂವರು ಪಾರ್ಟಿಯಲ್ಲಿ ಭಾಗವಹಿಸಿದ್ದು, ಅಲ್ಲಿ ಮದ್ಯ ಸೇವಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಟ್ಟಡದ ಛಾವಣಿಯಿಂದ ಕೆಳಗೆ ಬಿದ್ದಿರುವ ಸುಬ್ರಮಣಿಯನ್ನು ಆತನ ಸ್ನೇಹಿತ ಗಮನಿಸಿದ್ದು, ಬಳಿಕ ಸುಬ್ರಮಣಿಯನ್ನು ವಿಚಾರಿಸಲು ಹೋದಾಗ ಆತ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ತಕ್ಷಣ ಆತನನ್ನು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತ್ತಾದರೂ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.