ಯು.ಎನ್, ಜ 16 (Daijiworld News/MB) : ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನು ಚೀನಾ, ಪಾಕಿಸ್ತಾನ ಪ್ರಸ್ತಾಪ ಮಾಡಿದ್ದು ಈ ಪ್ರಸ್ತಾಪವನ್ನು ವಿಶ್ವ ಸಂಸ್ಥೆ ತಿರಸ್ಕಾರ ಮಾಡಿದೆ.
ತನ್ನ ಪರವಾಗಿ ಯಾವ ದೇಶಗಳ ಬಗ್ಗೆ ಬೆಂಬಲ ಪಡೆಯಲು ಸಾಧ್ಯವಾಗದ ಪಾಕಿಸ್ತಾನ, ಸದ್ಯ ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸುವಲ್ಲಿ ಗಮನ ನೀಡಬೇಕು ಎಂದು ಹೇಳಿದೆ.
ಕಾಶ್ಮೀರ ವಿವಾದವನ್ನು ಬಗೆಹರಿಸಲು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಕೋರಿದ್ದು ಚೀನಾ ದೇಶ ಮಾತ್ರ ಬೆಂಬಲ ನೀಡಿದೆ. ಈ ವಿವಾದವು ಭಾರತ ಮತ್ತು ಪಾಕಿಸ್ತಾನಗಳ ದ್ವಿಪಕ್ಷೀಯ ವಿಷಯವಾಗಿರುವುದರಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಳಿದ ರಾಷ್ಟ್ರಗಳು ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿಲ್ಲ. ಈ ಹಿನ್ನಲೆಯಲ್ಲಿ ಭದ್ರತಾ ಮಂಡಳಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗುಪ್ತ ಸಮಾಲೋಚನಾ ಸಭೆಯಲ್ಲಿ ಇತರ ವಿಷಯಗಳ ಬಗ್ಗೆ ಚರ್ಚೆ ಮಾಡುವ ಸಂದರ್ಭದಲ್ಲಿ ಚೀನಾ ಕಾಶ್ಮೀರ ವಿಷಯವನ್ನು ಪ್ರಸ್ತಾಪ ಮಾಡಿದ್ದು ಆ ವಿಶ್ವಸಂಸ್ಥೆ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರವೊಂದು ಮತ್ತೆ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದೆ, ಆದರೆ ಅದಕ್ಕೆ ಫಲಿತಾಂಶ ಮಾತ್ರ ಶೂನ್ಯವಾಗಿ ಸಿಕ್ಕಿದೆ. ಪಾಕಿಸ್ತಾನದ ಪ್ರಯತ್ನಕ್ಕೆ ಯಾವ ದೇಶಗಳೂ ಬೆಂಬಲ ನೀಡಲು ಮುಂದಾಗದಿರುವುದು ಸಂತೋಷದ ವಿಷಯ ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.