ನ್ಯೂಯಾರ್ಕ್, ಜ.16 (Daijiworld News/PY) : ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಅರಣ್ಯ ಪ್ರದೇಶ ನಾಶವಾಗಿದ್ದು, ಕೋಟ್ಯಾಂತರ ಪ್ರಾಣಿ-ಪಕ್ಷಿಗಳು ಕಾಡ್ಗಿಚ್ಚಿನಿಂದಾಗಿ ಸಾವನ್ನಪ್ಪಿವೆ. ಹೀಗಾಗಿ ಫೇಸ್ಬುಕ್ ಸಂಸ್ಥೆಯು 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳನನ್ನು ಆಸ್ಟ್ರೇಲಿಯನ್ ರೆಡ್ ಕ್ರಾಸ್ಗಳಿಗೆ ಕಾಡ್ಗಿಚ್ಚು ಪರಿಹಾರ ದೇಣಿಗೆಯಾಗಿ ನೀಡಲು ಸಿದ್ದವಾಗಿದೆ.
ಪ್ರಸ್ತುತ ಫೇಸ್ಬುಕ್ ವಿಪತ್ತು ನಕ್ಷೆಗಳನ್ನು ಶೈಕ್ಷಣಿಕ ಸಂಸ್ಥೆಗಳು ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಪರಿಹಾರ ಕಾರ್ಯಗಳಿಗೆ ಬಳಸುತ್ತಿವೆ.
ಕಾಡ್ಗಿಚ್ಚಿನ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ. ವನ್ಯ ಜೀವಿಗಳು ಅರಣ್ಯ ಪ್ರದೇಶದಲ್ಲಾವರಿಸಿದ ಬೆಂಕಿಯ ಜ್ವಾಲೆಗಳಿಂದ ತಪ್ಪಿಸಿಕೊಳ್ಳಲಾಗದೆ ಸಾವನ್ನಪ್ಪುತ್ತಿವೆ. ಹವಮಾನದ ಬದಲಾವಣೆಯಿಂದ ಉಂಟಾಗಿರುವ ಪ್ರಕೃತಿ ವಿಕೋಪಕ್ಕೆ ದೇಶವೇ ಬೆಚ್ಚಿ ಬಿದ್ದಿದ್ದು, ಕೋಲಾ ಎಂಬ ಪ್ರಾಣಿಯ ಸಂತತಿ ವಿನಾಶದ ಅಂಚಿಗೆ ತಲುಪಿದೆ ಎನ್ನಲಾಗಿದೆ. ಈ ವೇಳೆ ಪ್ರತಿಯೊಬ್ಬರು ಸಹಾಯ ಮಾಡುವುದು ಅಗತ್ಯ ಎಂದು ಫೇಸ್ಬುಕ್ ಸಂಸ್ಥೆ ತಿಳಿಸಿದೆ.