ಬಾಗ್ದಾದ್, ಜ 19 (Daijiworld News/MB) : ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ದೈತ್ಯ ಉಗ್ರನೋರ್ವ ಬಂಧನವಾಗಿದ್ದು ಆತನನ್ನು ಕೊಂಡೊಯ್ಯಲು ಇರಾಕ್ ಭದ್ರತಾ ಪಡೆ ಒದ್ದಾಡ ಬೇಕಾಗಿದೆ.
ಇಸಿಸ್ನ ದೈತ್ಯ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿ ಅಲಿಯಾಸ್ ಜಬ್ಬಾ ದಿ ಯನ್ನು ಇರಾಕ್ನ ವಿಶೇಷ ಕಾರ್ಯಪಡೆ ಸೈನಿಕರು ಬಂಧಿಸಿದ್ದು ಆತ ಬರೋಬ್ಬರಿ 250 ಕೆಜಿ ತೂಕದವಿದ್ದಾನೆ. ಆತ ತಲೆಮರೆಸಿಕೊಂಡಿರುವ ಜಾಗವನ್ನು ವಿಶೇಷ ಕಾರ್ಯಪಡೆ ಸಿಬ್ಬಂದಿಗಳು ಪತ್ತೆಹಚ್ಚಿದ್ದು ಆತನನ್ನು ಬಂಧನ ಮಾಡಲು ಮಂದಾಗಿದ್ದು ಆತನನ್ನು ಅಲ್ಲಿಂದ ರವಾನೆ ಮಾಡಲು ಕಷ್ಟಪಟ್ಟಿದ್ದಾರೆ.
ಆತನನ್ನು ಬಂಧನ ಮಾಡಿ ಕೊಂಡೊಯ್ಯಲು ಎಂದು ಭದ್ರತಾ ಪಡೆಯವರು ಕಾರು ತಂದಿದ್ದು ಆ ಕಾರಿನಲ್ಲಿ ಜಬ್ಬಾನನ್ನು ಕೂರಿಸಲು ಆಗಲಿಲ್ಲ. ಈ ಹಿನ್ನಲೆಯಲ್ಲಿ ಕೊನೆಗೆ ಮಿನಿಟ್ರಕ್ ತರಿಸಿ ಅದರಲ್ಲಿ ಆತನನ್ನು ಮಲಗಿಸಿಕೊಂಡು ಕೊಂಡ್ಯೊಯ್ದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಲ್ಲದೆ ಈ ಬಗ್ಗೆ ಲಂಡನ್ನಲ್ಲಿ ನೆಲೆಸಿರುವ ಇಸ್ಲಾಮಿಕ್ ಮೂಲಭೂತವಾದ ವಿರೋಧಿ ಹೋರಾಟಗಾರ ಮಾಜಿದ್ ನವಾಜ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.