ದುಬೈ, ಜ.19 (Daijiworld News/PY) : "ಭಾರತ ಯಾಕೆ ಪೌರತ್ವ ಕಾಯ್ದೆ ಮಾಡಿದೆ ಎನ್ನುವುದು ಗೊತ್ತಿಲ್ಲ. ಆದರೆ, ಇಂತಹ ಕಾಯ್ದೆಗಳು ಅನಗತ್ಯ" ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ಭಾನುವಾರ ದುಬೈನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ಭಾರತದ ಆಂತರಿಕ ವಿಚಾರವಾದರೂ ಅನಗತ್ಯ" ಎಂದು ಹೇಳಿದರು.
"ಬಾಂಗ್ಲಾದೇಶದಲ್ಲಿ ಸುಮಾರು 161 ದಶಲಕ್ಷ ಹಿಂದುಗಳು ನೆಲೆಸಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆಯ ಪೈಕಿ ಶೇ.10.7ರಷ್ಟು ಹಿಂದೂಗಳೇ ಇದ್ದಾರೆ. ಶೇ.0.6ರಷ್ಟು ಬೌದ್ಧರು ವಾಸಿಸುತ್ತಿದ್ದಾರೆ. ಧರ್ಮದ ಕಾರಣಕ್ಕಾಗಿ ನಾವು ಭಾರತಕ್ಕೆ ವಲಸೆ ಹೋಗಲು ಅಗುವುದಿಲ್ಲ. ತಾವು ಬಾಂಗ್ಲಾದೇಶದ ಪ್ರಜೆಗಳು, ಇಲ್ಲಿಯೇ ನೆಲೆಸುತ್ತೇವೆ" ಎಂದು ತಿಳಿಸಿದ್ದಾರೆ.