ಲಂಡನ್, ಜ 21 (Daijiworld News/MB): ಇಂಗ್ಲೆಂಡ್ನ ಮಿಡ್ಲ್ಯಾಂಡ್ಸ್ ಪ್ರದೇಶದ ನಾಟಿಂಗ್ ಹ್ಯಾಮ್ನ ಪಬ್ ಬಳಿ ನಡೆದ ಹಲ್ಲೆ ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಮೃತ ವಿದ್ಯಾರ್ಥಿನಿಯನ್ನು ಅರ್ಜುನ್ ಸಿಂಗ್ ನಾಟಿಂಗ್ ಹ್ಯಾಮ್ನ ಟ್ರೆಂಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು ಆತನ ಮೇಲೆ ಶನಿವಾರ ಸಂಜೆ ಹಲ್ಲೆ ನಡೆದಿತ್ತು.
ಹಲ್ಲೆ ನಡೆದ ಬಳಿಕ ವಿದ್ಯಾರ್ಥಿ ಅರ್ಜುನ್ (20) ಅನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಅರ್ಜುನ್ ಸಿಂಗ್ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು 20 ವರ್ಷದ ಯುವಕನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.