ವುಹಾನ್, ಜ 27 (Daijiworld News/MB) : ಚೀನಾದಲ್ಲಿ ಕೊರೋನಾ ವೈರಸ್ನಿಂದಾಗಿ ಇನ್ನಷ್ಟು ಮಂದಿ ಮೃತರಾಗುತ್ತಲ್ಲೇ ಇದ್ದಾರೆ. ಮೃತರ ಸಂಖ್ಯೆ ಈಗ 80ಕ್ಕೆ ಏರಿಕೆಯಾಗಿದೆ. ಆದರೆ ಭಾರತೀಯರು ಯಾರೂ ಈ ವೈರಸ್ಗೆ ತುತ್ತಾಗಿಲ್ಲ ಎಂದು ಎಂಇಎ ತಿಳಿಸಿದೆ.
ಭಾನುವಾರ 2000 ಮಂದಿಗೆ ಸೋಂಕು ತಗಲಿರುವುದು ಖಚಿತವಾಗಿದ್ದು ಒಂದೇ ದಿನದಲ್ಲಿ ಸುಮಾರು 2,744 ಜನರು ಈ ಸೋಂಕುವಿಗೆ ತುತ್ತಾಗಿದ್ದರೆ ಎಂದು ಖಚಿತವಾಗಿದೆ. ಮೊದಲ ಬಾರಿಗೆ ಈ ವೈರಸ್ ಕಂಡು ಬಂದ ವುಹಾನ್ ನ ಹುಬೈ ನಗರದಲ್ಲಿ ಹೊಸದಾಗಿ 24 ಜನರಲ್ಲಿ ಸೋಂಕು ಇರುವುದು ಕಂಡುಬಂದಿದೆ.
ಹುಬೈ ನಗರದಲ್ಲಿ ಎಲ್ಲಾ ವ್ಯಾಪಾರಗಳು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು ಚೀನಾ ಸರ್ಕಾರ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಹಾಗೆಯೇ ಚೀನಾದಲ್ಲಿರುವ ಭಾರತೀಯರು ಯಾರೂ ಕೂಡಾ ಈ ಸೋಂಕಿಗೆ ತುತ್ತಾಗಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ.
ಬೀಜಿಂಗ್ ನಲ್ಲಿರುವ ಭಾರತದ ರಾಯಭಾರಿ ಕಚೇರಿ ಚೀನಾದಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.