ಬಾಗ್ದಾದ್, ಜ 27 (Daijiworld News/MB): ಅಮೇರಿಕಾ ರಾಯಭಾರ ಕಚೇರಿಗಳು ಸೇರಿದಂತೆ ಹಲವು ವಿದೇಶಿ ರಾಯಭಾರ ಕಚೇರಿಗಳಿರುವ ಬಾಗ್ದಾದ್ ನ ಹಸಿರು ವಲಯಕ್ಕೆ 5 ಕತ್ಯುಷಾ ರಾಕೆಟ್ ಗಳು ಬಂದು ಅಪ್ಪಳಿಸಿವೆ ಇರಾಕ್ನ ಭದ್ರತಾ ಪಡೆಗಳು ಸ್ಪಷ್ಟ ಪಡಿಸಿದೆ ಎಂದು ಮಾಧ್ಯಮಗಳು ವರದಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಇರಾಕಿ ರಾಜಧಾನಿಯ ಮಧ್ಯಭಾಗದಲ್ಲಿ ಹೆಚ್ಚು ಭದ್ರತೆಯುಳ್ಳ ಪ್ರದೇಶ ಬಾಗ್ದಾದ್ನ ಹಸಿರು ವಲಯವಾಗಿದ್ದು ಅಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ವಿದೇಶಿ ರಾಜತಾಂತ್ರಿಕ ಕಚೇರಿಗಳು ಇವೆ. ಬಾಗ್ದಾದ್ನಿಂದ ಅಮೇರಿಕಾದ ಸೈನ್ಯವನ್ನು ಹಿಂಪಡೆದುಕೊಳ್ಳುವಂತೆ ಎರಡು ದಿನದ ಹಿಂದೆ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆ ನಡೆದ ಎರಡು ದಿನದಲ್ಲೇ ಟೈಗ್ರೀಸ್ ನದಿ ಸಮೀಪ ದೊಡ್ಡದಾದ ಶಬ್ದ ಕೇಳಿಬಂದಿದ್ದು ರಾಕೆಟ್ಗಳು ಬಂದು ಅಪ್ಪಳಿಸಿದೆ ಎಂದು ಖಚಿತವಾಗಿದೆ ಎಂದು ತಿಳಿದು ಬಂದಿದೆ. ಹಾಗೆಯೇ ಅಮೆರಿಕಾವನ್ನೇ ಗುರಿಯಾಗಿಟ್ಟು ಈ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ತಿಂಗಳ ಆರಂಭದಲ್ಲಿ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕಾ ವೈಮಾನಿಕ ದಾಳಿ ನಡೆಸಿ ಇರಾನಿನ ಜನರಲ್ ಖಾಸೀಂ ಸೊಲೈಮಾನಿ ಅವರನ್ನು ಹತ್ಯೆ ಮಾಡಿತ್ತು, ಈ ಘಟನೆಯ ನಂತರ ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಉದ್ವಿಗ್ನತೆ ಹೆಚ್ಚುತ್ತಿದ್ದು ಯುದ್ಧ ಭೀತಿಯೂ ಹೆಚ್ಚುತ್ತಿದೆ.