ಚೀನಾ, ಜ 28(Daijiworld News/MSP): ಪ್ರಪಂಚದಾದ್ಯಂತ ತೀವ್ರ ಆತಂಕ ಸೃಷ್ಟಿ ಮಾಡಿರುವ ಕೊರೋನಾ ಡೆಡ್ಲಿ ವೈರಸ್ ದಾಳಿ ಮುಂದುವರೆದಿದ್ದು, ಈ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 110ಕ್ಕೆ ಏರಿದೆ.
ಹೊಸದಾಗಿ ಮತ್ತೆ 1,500 ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ವೇಗವಾಗಿ ವ್ಯಾಪಿಸುತ್ತಿರುವ ಈ ರೋಗಕ್ಕೆ ಕಡಿವಾಣ ಹಾಕಲು ಚೀನಾ ಸರ್ಕಾರ ತುರ್ತು ಕ್ರಮಗಳ ನಡುವೆಯೂ ವೈರಸ್ನ ಕರಾಳ ಹಸ್ತವನ್ನು ಚಾಚುತ್ತಿದೆ.
ರೋಗ ಲಕ್ಷಣ ಕಾಣಿಸಿಕೊಂಡವರಲ್ಲಿ 461 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿರುವ ಚೀನಾ ಸರ್ಕಾರ, ಪ್ರಧಾನಿ ಲಿ ಕೆಖಿಯಾಂಗ್ ನೇತೃತ್ವದಲ್ಲಿ ಉನ್ನತ ಸಮಿತಿಯೊಂದನ್ನು ರಚನೆ ಮಾಡಿದೆ.
ಇದಲ್ಲದೆ ತೈವಾನ್ನಲ್ಲಿ 7 ಮಂದಿ, ಜಪಾನ್ 3 ಮಂದಿ, ದಕ್ಷಿಣ ಕೊರಿಯಾ 3 , ಅಮೆರಿಕಾ 3, ವಿಯೆಟ್ನಾಂ 3, ಮಲೇಷಿಯಾ3, ಸಿಂಗಾಪೂರ್ 4, ಆಸ್ಟ್ರೇಲಿಯಾ 4, ಫ್ರಾನ್ಸ್ 3, ಶ್ರೀಲಂಕಾ 1 ಮತ್ತು ನೇಪಾಳದಲ್ಲಿ ಇಬ್ಬರಿಗೆ ಈ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.