ವುಹಾನ್, ಜ 29 (Daijiworld News/MB): ಕೊರೋನಾ ವೈರಸ್ಗೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಲ್ಲೇ ಇದ್ದು 132ಕ್ಕೆ ಜನರು ಸಾವನ್ನಪ್ಪಿದ್ದಾರೆ. ಹಾಗೆಯೇ ಸೋಂಕು ತಗುಲಿದವರ ಸಂಖ್ಯೆಯು ಏರುತ್ತಲ್ಲೇ ಇದ್ದು ಈಗಾಗಲೇ 6000 ಹೊಸ ಪ್ರಕರಣಗಳು ಪತ್ತೆಯಾಗಿರುವ ಖಚಿತ ಮಾಹಿತಿಯನ್ನು ರಾಷ್ಟ್ರೀಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಒಂದು ದಿನದಲ್ಲಿ 1459 ಜನರಲ್ಲಿ ಈ ವೈರಸ್ ಪತ್ತೆಯಾಗಿದ್ದು ಪ್ರಮುಖ ನಗರಗಳಾದ ಬೀಜಿಂಗ್ ನಲ್ಲಿ 91 ಜನರು ಮತ್ತು ಶಾಂಘೈ ನಲ್ಲಿ 80 ಜನರಿಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.
ಒಟ್ಟು ಚೀನಾದಲ್ಲಿ ಈ ವೈರಸ್ಗೆ 9238 ಜನರು ತುತ್ತಾಗಿದ್ದಾರೆ ಎಂದು ಶಂಕಿಸಲಾಗಿದ್ದು ಚೀನಾ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೆಯೇ ೨ ಹೊಸ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುತ್ತಿದ್ದು ಫೆ. 3ರೊಳಗೆ ಪೂರ್ಣವಾಗಲಿದೆ ಎಂದು ಹೇಳಲಾಗಿದೆ.
ಈ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ದೇಶಗಳಲ್ಲಿ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಜಪಾನ್ ತನ್ನ 200 ಪ್ರಜೆಗಳನ್ನು ಹಾಗೂ ಅಮೆರಿಕಾ ತನ್ನ ದೇಶದ 240 ಪ್ರಜೆಗಳನ್ನು ಏರ್ ಲಿಫ್ಟ್ ಮೂಲಕ ವಾಪಾಸ್ ಕರೆಸಿಕೊಂಡಿದೆ.
ವುಹಾನ್ನಲ್ಲಂತೂ ಜನಜೀವನಕ್ಕೆ ಭಾರೀ ಪೆಟ್ಟಾಗಿದ್ದು ಬಹುತೇಕ ಅಂಗಡಿಗಳನ್ನು ಮುಚ್ಚಲಾಗಿದೆ. ಹಾಗೆಯೇ ದೊಡ್ಡ ದೊಡ್ಡ ತನ್ನ ನೌಕರರಿಗೆ ಮನೆಯಿಂದಲ್ಲೇ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದೆ.