ದೋಹಾ, ಜ 29 (Daijiworld News/MB) : ದಕ್ಷಿಣ ಕನ್ನಡ ಮುಸ್ಲೀಮ್ ವೆಲ್ಫೇರ್ ಅಸೋಸಿಯೇಷನ್ (SKMWA ) ದೋಹಾ-ಕತಾರ್ನ 2020 -2021 ರ ಕಾರ್ಯಕಾರಿ ನಿರ್ವಾಹಣಾ ಸಮಿತಿಯ ತನ್ನ 27ನೇ ವಾರ್ಷಿಕ ಮಹಾಸಭೆ ಜ 24 ರಂದು ನಡೆದಿದೆ. ಈ ಸಭೆಯಲ್ಲಿ ಸರ್ವಾನುಮತದಿಂದ ನೂತನ ಸಮಿತಿ ಆಯ್ಕೆ ಮಾಡಲಾಗಿದೆ.
ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ (ಮೂಡುಬಿದ್ರಿ) ಅವರು ಅಧ್ಯಕ್ಷತೆ ವಹಿಸಿ 2018 ಮತ್ತು 2019 ರ ಅವಧಿಯಲ್ಲಿ ಸಮಿತಿಯ ಚಟುವಟಿಕೆಗಳ ಬಗ್ಗೆ ಸದಸ್ಯರಿಗೆ ಸವಿಸ್ತಾರವಾಗಿ ವಿವರಿಸಿದರು.
ಅಬ್ದುಲ್ ಕಾಸಿಂ (ಉಡುಪಿ) ಅವರು ಸ್ವಾಗತಿಸಿದರು. ನಾಸಿರ್ (ಉಳ್ಳಾಲ) ಹಾಗು ಸತ್ತಾರ್ (ಮೊಂಟೆಪದವು) ವಾರ್ಷಿಕ ಮತ್ತು ಹಣಕಾಸು ವರದಿಯನ್ನು ಸಲ್ಲಿಸಿದರು. ರಝಕ್ (ಪುತ್ತೂರು) ಅವರು ಸಂಸ್ಥೆಯ ಅತಿಥಿಗಳೆಲ್ಲರನ್ನು ವಂದಿಸಿದರು.
ಶ್ರೀ ಅಬ್ದುಲ್ ಮಜೀದ್ (ಮೂಡುಬಿದ್ರಿ)ಯವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಮರು ಆಯ್ಕೆ ಮಾಡಿಕೊಳ್ಳಲಾಯಿತು.
ಉಪಾಧ್ಯಕ್ಷರಾಗಿ ಶ್ರೀ ಅಬ್ದುಲ್ ಕಾಸಿಮ್(ಉಡುಪಿ), ರಝಕ್ (ಪುತ್ತೂರು), ಇಸ್ಮಾಯಿಲ್ (ಜೋಕಟ್ಟೆ), ಕಾರ್ಯದರ್ಶಿಯಾಗಿ ಶ್ರೀ ಅಬ್ದುಲ್ ಸತ್ತರ್ (ಮೊಂಟೆಪದವು), ಜಂಟಿ ಕಾರ್ಯದರ್ಶಿಯಾಗಿ ಶ್ರೀ ಅಫ್ಜಲ್ ಜಮೀಲ್ ಮತ್ತು ಖಾದರ್ ಸಾಗರ್, ಖಜಾಂಚಿಗಳಾಗಿ ಶ್ರೀ ಅಬ್ದುಲ್ ನಾಸಿರ್ ಉಳ್ಳಾಲ್, ಮತ್ತು ಸಿಎ ಮೊಹಮ್ಮದ್ ಕೊಂಡಾನಾ, ಹೊಸ ಸಮಿತಿಯಲ್ಲಿ ಏಳು ಸಲಹೆಗಾರರಾದ ಶ್ರೀ ಮೊಹಮ್ಮದ್ ಶಮೀಮ್ (ಹಳೆಯಂಗಡಿ), ಫಿರೋಜ್ (ಕುಂದಾಪುರ), ಇಬ್ರಾಹಿಂ ಬ್ಯಾರಿ, ಅಬ್ದುಲ್ಲಾ ಮೋನು( ಮಂಗಳೂರ್)ಅಬ್ದುಲ್ ಮಜೀದ್ (ಹಳೆಯಂಗಡಿ) ಸುಹೈಬ್,ಅರಬಿ ಕುನ್ಹಿ ಸೇರಿದ್ದಾರೆ. (ಕ್ರೀಡೆ ಮತ್ತು ಸಂಸ್ಕ್ರತಿ) ಶ್ರೀ ಇಫ್ತಿಕರ್, ಅಮಿರ್ ಹಂಝ, ಮತ್ತು ಇಮ್ತಿಯಾಜ್, ವಿವಿಧ ಕಾರ್ಯಕ್ರಮದ ಸಂಯೋಜಕರಾಗಿ ಎಂ ಅಬ್ಬು (ಜೋಕಟ್ಟೆ) ಇಸ್ಮಾಯಿಲ್ ಎಂ ಯನ್( ಜೋಕಟ್ಟೆ),ಅಬ್ದುಲ್ ಖಾದರ್ ಜೈಲಾನಿ,ಅಬ್ದುಲ್ ರಶೀದ್, ಇಲ್ಯಾಸ್ ಬ್ಯಾರಿ ಮೊಹಮ್ಮದ್ ಇನಾಯತ್, ರಿಯಾಜ್ ಉಮ್ಮರ್, ಸಫ್ವಾನ್ (ಸಂತೋಷ್ ನಗರ), ಮುಷೀರ್ ನವಾಜ್, ಮತ್ತು ಅಬ್ದುಲ್ ಹಮೀದ್ (ಕತಾರ್ ಏರ್) ಆಯ್ಕೆಯಾಗಿದ್ದಾರೆ.