ಚೀನಾ , ಜ 31(Daijiworld News/MSP): ಚೀನಾದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 213ಕ್ಕೇ ಏರಿಯಾಗಿದ್ದು. ೧೭ ರಾಷ್ಟ್ರಗಳಿಗೆ ಕೊರೋನಾ ವೈರಸ್ ಹರಡಿದ್ದುಈ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO) ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.
ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಅಧನೊಮ್ ಗೆಬ್ರೆಯಾಸಿಸ್ ಅವರು ತುರ್ತು ಪಡೆಯ ರಹಸ್ಯ ಸಭೆ ನಡೆಸಿ, ವೈರಸ್ ಸೋಂಕನ್ನು ಅಂತಾರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದರು. ಆದರೆ ಚೀನಾ ದೇಶಕ್ಕೆ ಪ್ರವಾಸ ಹಾಗೂ ವ್ಯಾಪಾರ ನಿರ್ಬಂಧವನ್ನು ಘೋಷಿಸಿಲ್ಲ.
ಚೀನಾದ ಹುಬೈ ಪ್ರಾಂತ್ಯದಲ್ಲೇ ಸಾವನ್ನಪ್ಪಿದವರ ಸಂಖ್ಯೆ 204ಕ್ಕೆ ಏರಿದ್ದು,ಇದರೊಂದಿಗೆ 9,692 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜಿನೀವಾ ಮೂಲದ ಸಂಸ್ಥೆಯ ಹಿರಿಯ ಅಧಿಕಾರಿಗಳು ಚೀನಾಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಈಗಾಗಲೇ 1೭ ದೇಶಗಳಲ್ಲಿ ಸೋಂಕು ಹಬ್ಬಿರುವ ಕುರಿತ ಮಾಹಿತಿ ನೀಡಿದ್ದಾರೆ.
ಇಟಲಿ ಕೂಡ ತನ್ನ ದೇಶಕ್ಕೆ ಬಂದಿರುವ ಇಬ್ಬರು ಚೀನಾ ಪ್ರವಾಸಿಗರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಘೋಷಿಸಿದೆ. ಆ ಮೂಲಕ ಇಟಲಿ ಮತ್ತು ಚೀನಾಕ್ಕೆ ಇರುವ ಎಲ್ಲಾ ವಿಮಾನ ಸೇವೆಗಳನ್ನು ರದ್ದುಪಡಿಸಿದೆ. ಇನ್ನು ಭಾರತದ ಕೇರಳದಲ್ಲೂ ಚೀನಾ ಪ್ರವಾಸದಿಂದ ಯುವತಿಯೋರ್ವರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.