ವಾಷಿಂಗ್ಟನ್, ಫೆ 06 (Daijiworld News/MB) : ಸೆನೆಟ್ನಲ್ಲಿ ಡೆಮಾಕ್ರೆಟಿಕ್ ಪಕ್ಷ ಮಂಡಿಸಿದ್ದ ವಾಗ್ದಂಡನೆಗೆ ಸೋಲಾಗಿದ್ದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಗೆಲುವು ದೊರೆತಿದೆ. ವಾಗ್ದಂಡನೆಯಿಂದ ಪಾರಾದ ಮೂರನೇ ಅಧ್ಯಕ್ಷ ಇವರಾಗಿದ್ದಾರೆ.
ತಮ್ಮ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಅವರು ದುರುಪಯೋಗ ಮಾಡಿದ್ದಾರೆ ಹಾಗೂ ಸಂಸತ್ ತನಿಖೆಗೆ ಅಡ್ಡಿ ಮಾಡಿದ್ದಾರೆ ಎಂದು ಆರೋಪ ಮಾಡಿ ಡೆಮಾಕ್ರೆಟಿಕ್ ಪಕ್ಷ ವಾಗ್ದಂಡನೆ ಮಂಡಿಸಿತ್ತು.
ಟ್ರಂಪ್ ಪರ ಕಾನೂನು ತಂಡ ಡೆಮಾಕ್ರೆಟಿಕ್ ಪಕ್ಷ ಮಾಡಿರುವ ವಾಗ್ದಂಡನೆ ದುರ್ಬಲವಾಗಿದೆ, ಸಂವಿಧಾನದ ಅಪಾಯಕ ಕೃತ್ಯ. ಅಧ್ಯಕ್ಷರಾದ ಟ್ರಂಪ್ ಯಾವುದೇ ತಪ್ಪನ್ನೆಸಗಿಲ್ಲ ಆ ಹಿನ್ನಲೆಯಲ್ಲಿ ವಾಗ್ದಂಡನೆಯನ್ನು ತಿರಸ್ಕಾರ ಮಾಡಬೇಕು ಎಂದು ಮನವಿ ಮಾಡಿದ್ದರು.
ಈ ಬಳಿಕ ಮತದಾನ ನಡೆದಿದ್ದು ಅದರಲ್ಲಿ ಟ್ರಂಪ್ ಪರವಾಗಿ 52 ಮತಗಳು ಹಾಗೂ ವಿರುದ್ಧವಾಗಿ 48 ಮತಗಳು ಮತಗಳು ಬಿದ್ದಿದ್ದು ಟ್ರಂಪ್ ವಾಗ್ದಂಡನೆಯಿಂದ ಪಾರಾಗಿದ್ದಾರೆ.