ಬೀಜಿಂಗ್ , ಫೆ 09 (Daijiworld News/MB) : ಚೀನಾದಲ್ಲಿ ಕೊರೋನಾ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆ ಏರುತ್ತಲ್ಲೇ ಇದ್ದು ಹ್ಯುಬೀ ಪ್ರಾಂತ್ಯದಲ್ಲಿ ಭಾನುವಾರ 81 ಹೊಸ ಸಾವಿನ ಪ್ರಕರಣಗಳು ವರದಿಯಾಗಿದ್ದು, ಒಟ್ಟಾಗಿ ಈ ಮಾರಣಾಂತಿಕ ಸೋಂಕಿನಿಂದ 803ಕ್ಕೆ ಮೃತಪಟ್ಟಿದ್ದಾರೆ.
ಚೀನಾದ ಕೇಂದ್ರ ಪ್ರಾಂತ್ಯದಲ್ಲಿ ಮತ್ತೆ 2147 ಪ್ರಕರಣಗಳು ಪತ್ತೆಯಾಗಿದೆ ಎಂದು ಹ್ಯುಬೀ ಆರೋಗ್ಯ ಆಯೋಗ ದೃಢಪಡಿಸಿದೆ. ಇಲ್ಲಿ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ವೈರಸ್ ಪತ್ತೆಯಾಗಿದ್ದು ಚೀನಾದಲ್ಲಿ ಇದುವರೆಗೆ 36,690 ಪ್ರಕರಣಗಳು ದೃಢಪಟ್ಟಿವೆ
ಹ್ಯುಬೀ ರಾಜಧಾನಿ ಪೂಹಾನ್ನಲ್ಲಿ ಕಳೆದ ವರ್ಷ ಕಾಡು ಪ್ರಾಣಿಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಲ್ಲಿ ಹೊಸದಾದ ಒಂದು ವೈರಸ್ ಕಂಡುಬಂದಿತ್ತು. ಆ ಬಳಿಕ ಈ ಸೋಂಕು ಇಡೀ ದೇಶಕ್ಕೆ ಹರಡಿತ್ತು.
ಚೀನಾದಲ್ಲಿ ಈ ವೈರಸ್ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ವೈರಸ್ ದಾಳಿ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಹೇಳಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
2002-03ರಲ್ಲಿ ಮಾರಕ ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್)ನಿಂದ ವಿಶ್ವಾದ್ಯಂತ 774 ಮಂದಿ ಮೃತಪಟ್ಟಿದ್ದರು. ಆದರೆ ಕೊರೋನಾ ವೈರಸ್ನಿಂದಾಗಿ ಚೀನಾ ಒಂದು ದೇಶದಲ್ಲೇ 803ಕ್ಕೆ ಜನರು ಮೃತಪಟ್ಟಿದ್ದಾರೆ.