ಬೀಜಿಂಗ್, ಫೆ 16 (Daijiworld News/MB) : ಡೆಡ್ಲಿ ಕೊರೋನಾ ವೈರಸ್ನಿಂದಾಗಿ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇ ಇದ್ದು ಭಾನುವಾರಕ್ಕೆ ಮೃತರ ಸಂಖ್ಯೆ 1,600ನ್ನು ದಾಟಿದೆ.
ಈ ಮಧ್ಯೆ ಏಶ್ಯದ ಹೊರಭಾಗದಲ್ಲಿ ಕೊರೋನಾ ವೈರಸ್ನಿಂದಾಗಿ ಮೊದಲ ಸಾವು ಸಂಭವಿಸಿದ್ದು ವಿಶ್ವದಾದ್ಯಂತ ಜನತ ಆತಂಕಕ್ಕೆ ಕಾರಣವಾಗಿದೆ.
೨೦೧೯ರ ಡಿಸೆಂಬರ್ನಲ್ಲಿ ಕೊರೋನಾ ವೈರಸ್ ಮೊದಲ ಭಾರಿಗೆ ಪತ್ತೆಯಾದ ಚೀನಾದ ಹ್ಯುಬೀ ಪ್ರಾಂತ್ಯದಲ್ಲಿ ಒಟ್ಟು ಚೀನಾದಲ್ಲೇ 68 ಸಾವಿರಕ್ಕೂ ಅಧಿಕ ಮಂದಿಗೆ ಈ ಸೋಂಕು ತಗುಲಿದೆ. ಅಷ್ಟು ಮಾತ್ರವಲ್ಲದೇ ಸುಮಾರು 25 ದೇಶಗಳಿಗೆ ಇದು ಹಬ್ಬಿದೆ.
ಚೀನಾ ಸಧ್ಯಕ್ಷ ಕ್ಸಿ ಜಿಂಗ್ಪಾಂಗ್ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಭದ್ರತೆಗೆ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಿದ್ದಾರೆ. ರಾಜಧಾಣಿಗೆ ವಾಪಾಸ್ಸಾಗಿರುವ ಸೋಂಕಿತರು ಕನಿಷ್ಠ 14 ದಿನಗಳ ಕಾಲ ಸ್ವರ್ಯ ನಿರ್ಬಂಧ ವಿಧಿಸಿಕೊಂಡು ಹೊರಗೆ ಬರದಂತೆ ಸೂಚನೆ ನೀಡಲಾಗಿದೆ.
ಫ್ರೆಂಚ್ ಆರೋಗ್ಯ ಸಚಿವ ಆಗ್ನೆಸ್ ಬುಝ್ಯನ್ 80 ವರ್ಷದ ಚೀನಾ ಪ್ರವಾಸಿ ಕೊರೋನಾ ವೈರಸ್ನಿಂದಾಗಿ ಸಾವನ್ನಪ್ಪಿರುವುದನ್ನು ಪ್ರಕಟ ಮಾಡಿದೆ.
ಈ ಮೊದಲು ಚೀನಾ ಹೊರತುಪಡಿಸಿ ಫಿಲಿಫೀನ್ಸ್, ಹಾಂಕಾಂಗ್ ಹಾಗೂ ಜಪಾನ್ನಲ್ಲಿ ಮಾತ್ರ ಕೊರೋನಾ ವೈರಸ್ನಿಂದಾಗಿ ಸಾವು ಸಂಭವಿಸಿತ್ತು.