ಬರ್ಲಿನ್, ಫೆ.20 (DaijiworldNews/PY): ಜರ್ಮಿನಿಯ ಹನೌ ನಗರದಲ್ಲಿನ ಶಿಶಾ ಬಾರ್ ಗಳಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ 9ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ದಾಳಿಕೋರರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.
ಭಾರತೀಯ ಕಾಲಮಾನ ಸುಮಾರು 2:30 ಮಧ್ಯರಾತ್ರಿ ಸಮಯ ಫ್ರಾಂಕ್ ಫರ್ಟ್ನಿಂದ ಸುಮಾರು 20 ಕಿ.ಮೀ ದೂರದಲ್ಲಿ ಹನೌದಲ್ಲಿನ ಬಾರ್ಗಳನ್ನು ಗುರಿಯಾಗಿರಿಸಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಅಪರಿಚಿತ ಗುಂಪೊಂದು ಮೊದಲಿಗೆ ಶಿಶಾ ಬಾರ್ನಲ್ಲಿ ಗುಂಡಿನ ದಾಳಿ ನಡೆಸಿ ಮೂವರನ್ನು ಹತ್ಯೆಗೈದು, ಬಳಿಕ ಕಾರಿನಲ್ಲಿ ಪರಾರಿಯಾಗಿ ಅರೆನಾ ಬಾರ್ ಆಂಡ್ ಕೆಫೆಗೆ ನುಗ್ಗಿ ಐವರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ದಾಳಿ ಮಾಡಿರುವುದಕ್ಕೆ ಕಾರಣ ಪತ್ತೆಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿ ತಿಳಿಸಿದೆ.
ದಾಳಿಯ ಉದ್ದೇಶದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಕನಿಷ್ಟ 5 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಐದು ದಿನಗಳ ಹಿಂದೆಯಷ್ಟೆ ಬರ್ಲಿನ್ನಲ್ಲಿ ನಡೆದ ಶೂಟೌಟ್ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ.