ಬೀಜಿಂಗ್, ಫೆ.20 (DaijiworldNews/PY): ಚೀನಾದಲ್ಲಿ ಮಾರಾಣಾಂತಿಕ ಕೊರೋನಾ ವೈರಸ್ಗೆ ಮತ್ತಷ್ಟು ಜನರು ಸಾವನ್ನಪ್ಪಿದ್ದಾರೆ. ಇದೀಗ 114 ಹೊಸ ಸಾವುಗಳು ಸಂಭವಿಸಿದ್ದು, ಸಾವನ್ನಪ್ಪಿದವರ ಸಂಖೈ 2,118ಕ್ಕೆ ಏರಿಕೆಯಾಗಿದೆ.
ಇದುವರೆಗೂ 74,576 ಮಂದಿ ಕೊರೊನಾ ವೈರಸ್ ಸೋಂಕು ಪೀಡಿತರಾಗಿದ್ದು, 394 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ 31 ಪ್ರಾಂತ್ಯಗಳಿಂದ ದೊರೆತಿರುವ ಮಾಹಿತಿ ಪ್ರಕಾರ, 114 ಜನರು ವೈರಸ್ ದಾಳಿಗೆ ಸಾವನ್ನಪ್ಪಿದ್ದಾರೆ. ಒಟ್ಟಾರೆ 74,576 ಜನರಿಗೆ ಸೋಂಕು ತಗುಲಿದ್ದು, 2,118 ಜನರು ಕಳೆದ ಡಿಸೆಂಬರ್ನಿಂದ ಈಚೆಗೆ ಮೃತಪಟ್ಟಿದ್ದಾರೆ ಎಂದು ಗುರುವಾರ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಕೊರೋನಾ ವೈರಸ್ಗೆ ಸಿಲುಕಿರುವ ಹುಬೆ ಪ್ರಾಂತ್ಯದಲ್ಲಿ ಹೊಸದಾಗಿ 349 ಜನರಲ್ಲಿ ಸೋಂಕಿರುವುದು ದೃಢಪಟ್ಟಿದ್ದು, ಈ ಮೂಲಕ 62,031 ಪ್ರಕರಣಗಳಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಹುಬೆ ಪ್ರಾಂತ್ಯದಲ್ಲಿ 108 ಜನರು ಮೃತಪಟ್ಟಿದ್ದರೆ, ಹುಬೆ, ಶಾಂಗೈ, ಫುಜಿಯನ್, ಶಾಂಡೋಂಗ್, ಯುನ್ನಾನ್ ಹಾಗೂ ಶಾಂಕ್ಷಿಯಲ್ಲಿ ತಲಾ ಒಬ್ಬೊಬ್ಬರು ಬಲಿಯಾಗಿದ್ದಾರೆ. 4,922 ಜನರಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಬುಧವಾರ ದೊರೆತ ಮಾಹಿತಿ ಪ್ರಕಾರ, ಚೀನಾವಲ್ಲದೆ ಹಾಂಗ್ ಕಾಂಗ್ನಲ್ಲಿ 65 ಪ್ರಕರಣಗಳಲ್ಲಿ ಸೋಂಕು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ತೈವಾನ್ನಲ್ಲಿ 24 ಸೋಂಕು ಪೀಡಿತ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.