ನವದೆಹಲಿ, ಫೆ.29 (DaijiworldNews/PY) : ಅಫ್ಗಾನಿಸ್ತಾನದ ಜೊತೆ ಅಮೆರಿಕ ಶನಿವಾರ ಕತಾರ್ನ ದೋಹಾದಲ್ಲಿ ಮಹತ್ವದ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ವೀಕ್ಷಕರಾಗಿ ಭಾರತದ ಪ್ರತಿನಿಧಿ ಪಾಲ್ಗೊಳ್ಳುತ್ತಿದ್ದಾರೆ.
ಅಮೆರಿಕ 9/11ರ ಭಯೋತ್ಪಾದಕ ದಾಳಿಯ ಬಳಿಕ ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ನಿಗ್ರಹಕ್ಕಾಗಿ ರಕ್ಷಣಾ ಪಡೆಗಳನ್ನು ನಿಯೋಜಿಸಿತ್ತು. ಇದೀಗ ಅಮೆರಿಕ 19 ವರ್ಷಗಳ ಬಳಿಕ ತಾಲಿಬಾನ್ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುತ್ತಿದೆ.
ಅಮೆರಿಕ ಅಫ್ಗಾನಿಸ್ತಾನದಲ್ಲಿರುವ ಸಾವಿರ ಸಂಖ್ಯೆಯ ಸೇನಾ ಪಡೆಗಳನ್ನು ಹಿಂಪಡೆಯಬೇಕು, ಅಫ್ಗಾನಿಸ್ತಾನ ಸರ್ಕಾರ ತಾಲಿಬಾನಿ ಪಡೆಗಳೊಂದಿಗೆ ಔಪಚಾರಿಕ ಮಾತುಕತೆಗೆ ನಡೆಸಬೇಕು, ರಾಷ್ಟ್ರಾದ್ಯಂತ ರಾಜಕೀಯ ಹಾಗೂ ನಾಗರಿಕ ಸಂಸ್ಥೆಗಳು ಶಾಶ್ವತ ಕದನ ವಿರಾಮ ಘೋಷಿಸುವುದು, ಯುದ್ದೋತ್ತರ ಅಫ್ಗಾನಿಸ್ತಾನದಲ್ಲಿ ಅಧಿಕಾರ ಹಂಚಿಕೆ ವಿಚಾರಗಳು ಈ ಒಪ್ಪಂದದಲ್ಲಿರುವ ಪ್ರಮುಖಾಂಶಗಳಾಗಿವೆ.
ಅಫ್ಗಾನಿಸ್ತಾನದಲ್ಲಿ 2001ರಿಂದ ಅಮೆರಿಕದ 2352ರ ಸೈನಿಕರು ಬೀಡು ಬಿಟ್ಟಿದ್ದಾರೆ.
ತಾಲಿಬಾನ್ ಹಾಗೂ ಅಮೆರಿಕ ಪಡೆಗಳೊಂದಿಗೆ ಈ ಒಪ್ಪಂದದ ಕಾರ್ಯಕ್ರಮದಲ್ಲಿ ಭಾರತ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿ. ಈ ಕಾರ್ಯಕ್ರಮವು ದೋಹಾದಲ್ಲಿ ನಡೆಯುತ್ತಿದ್ದು, ಕತಾರ್ನ ಭಾರತದ ರಾಯಭಾರಿ ಪಿ. ಕುಮಾರನ್ ಅವರು ಭಾಗವಹಿಸುತ್ತಿದ್ದಾರೆ.
ಈ ಒಪ್ಪಂದವು ಅಮೆರಿಕ ಹಾಗೂ ತಾಲಿಬಾನ್ ಜೊತೆ ಮಾಡಿಕೊಳ್ಳುತ್ತಿರುವುದರ ವಿಚಾರವಾಗಿ ಎಲ್ಲರಿಗೂ ಸಂತೋಷವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಭಾರತದ ಪ್ರಧಾನಿಯೊಂದಿಗೆ ನಾನು ಇದೇ ವಿಚಾರವಾಗಿ ಮಾತನಾಡಿದೆ. ಭಾರತ ಈ ಒಪ್ಪಂದ ಏರ್ಪಡಲು ಇಷ್ಟಪಡುತ್ತಿದೆ. ಎಲ್ಲರಿಗೂ ಸಂತೋಷವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.