International
ನೂರುಲ್ ಹುದಾ ದುಬೈ ಸಮಿತಿಯ 3ನೇ ವಾರ್ಷಿಕ ಸಭೆ, ನೂತನ ಸಮಿತಿ ಆಯ್ಕೆ
- Wed, Mar 04 2020 01:45:18 PM
-
ದುಬೈ, ಮಾ.04 (DaijiworldNews/PY) : ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಯುಎಇ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದುಬೈ ರಾಜ್ಯ ಸಮಿತಿಯ ತೃತೀಯ ವಾರ್ಷಿಕ ಸಭೆಯು ದಿನಾಂಕ 28.02.2020 ಶುಕ್ರವಾರ ಜುಮಾ ನಮಾಜಿನ ಬಳಿಕ ದುಬೈ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೇಗ ಅವರ ಅಧ್ಯಕ್ಷತೆಯಲ್ಲಿ ದೇರಾ ಒರಿಯಂಟಲ್ ಕಾರ್ನರ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ನೂರುಲ್ ಹುದಾ ದುಬೈ ಸಮಿತಿಯ ಧಾರ್ಮಿಕ ಸಲಹೆಗಾರರಾದ ಹಮೀದ್ ಉಸ್ತಾದರ ದುವಾದೊಂದಿಗೆ ಆರಂಭವಾದ ಸಭೆಯಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಜನಾಬ್ ಅಶ್ರಫ್ ಪರ್ಲಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನೆರೆದವರನ್ನು ಸಭೆಗೆ ಬರಮಾಡಿದರು.
ನೂರುಲ್ ಹುದಾ ಯುಎಇ ಸಮಿತಿಯ ಸಲಹೆಗಾರರಾದ ನೌಶಾದ್ ಫೈಝಿ ಉಸ್ತಾದರು ಮಾತನಾಡಿ ಕಡ್ಡಾಯವಾದ ನಮಾಜ್ ಮತ್ತು ಉಪವಾಸ ಮಾತ್ರವಲ್ಲದೆ ದಾನ ಧರ್ಮ ಮತ್ತು ಕರುಣೆ ಹೊಂದಿರುವವರಿಗೆ ಸ್ವರ್ಗ ಪ್ರವೇಶಿಸಲು ಸಾಧ್ಯ, ಸೃಷ್ಟಿ ಕರ್ತನು ನಮಗೆ ಅಪಾರ ಅನುಗ್ರಹಗಳನ್ನು ಕರುಣಿಸಿದ್ದಾನೆ, ಅದರ ಬೆಲೆ ಕಲ್ಪಿಸಲು ಅಸಾಧ್ಯವಾದುದು, ಸಮುದಾಯವನ್ನು ಧಾರ್ಮಿಕವಾಗಿ ಮತ್ತು ಲೌಕಿಕವಾಗಿ ಪ್ರಜ್ಞಾವಂತರನ್ನಾಗಿಸುವ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯಂತಹ ವಿದ್ಯಾ ಸಂಸ್ಥೆಗಳ ಉನ್ನತಿಗೆ ಸಹಾಯ, ಸಹಕಾರಗಳನ್ನು ನೀಡಿ ಸಮುದಾಯ ಉನ್ನತಿಗೆ ಶ್ರಮಿಸುವ ಮೂಲಕ ಅಲ್ಲಾಹನ ಸಂತೃಪ್ತಿಗೆ ಪಾತ್ರರಾಗಬೇಕು ಎಂದು ಹೇಳುತ್ತಾ ಪವಿತ್ರ ಕುರಾನ್ ಸೂಕ್ತದೊಂದಿಗೆ ಸಭೆಯನ್ನು ಉದ್ಘಾಟಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ ಅವರು ವರದಿ ವಾಚಿಸಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು, ರಿಫಾಯಿ ಗೂನಡ್ಕ ಅವರು ಲೆಕ್ಕ ಪತ್ರ ಮಂಡಿಸಿದರು.
ದುಬೈ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಸುಲೈಮಾನ್ ಮೌಲವಿ ಅವರು ತಮ್ಮ ಎಂದಿನ ಲಘು ಹಾಸ್ಯ ಶೈಲಿಯಲ್ಲಿ ತನ್ನ ಅನುಭವವನ್ನು ಹಂಚಿಕೊಂಡು ನೆರೆದಿದ್ದವರನ್ನು ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು. ತಮ್ಮ ಅಧಿಕಾರ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಕ್ಲಸ್ಟರ್ ಸಮಿತಿಗಳ ಪದಾಧಿಕಾರಿಗಳನ್ನು ಮತ್ತು ದುಬೈ ಸಮಿತಿಯ ಪ್ರತಿಯೊಬ್ಬರನ್ನೂ ನೆನಪಿಸಿ ಮುಂದೆಯೂ ಎಲ್ಲರ ಸಹಕಾರ ಕೋರಿದರು ಮತ್ತು ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿದರು.
ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಲತೀಫ್ ಕೌಡಿಚ್ಚಾರ್ ಅವರು ಚುಣಾವಣಾ ಅದಿಕಾರಿಯಾಗಿ ಪದಾಧಿಕರಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು.
ನೂರುಲ್ ಹುದಾ ದುಬೈ ಸಮಿತಿಯ 2020-21ನೇ ಸಾಲಿನ ಪದಾಧಿಕರಿಗಳ ವಿವರ:
ಗೌರವ ಸಲಹೆಗಾರರು: ಶೆರೀಫ್ ಕಾವು, ಅಬ್ದುಲ್ ಲತೀಫ್ ಕೌಡಿಚ್ಚಾರ್, ಅಬ್ದುಲ್ ಸಲಾಮ್ ಬಪ್ಪಳಿಗೆ, ನೂರ್ ಮುಹಮ್ಮದ್ ನೀರ್ಕಜೆ, ಅಶ್ರಫ್ ಶಾ ಮಾಂತೂರು, ಸಲೀಂ ಅಲ್ತಾಫ್ ಪರಂಗಿಪೇಟೆ, ಬದ್ರುದ್ದೀನ್ ಹೆಂತಾರ್, ಮುಹಮ್ಮದ್ ರಫೀಕ್ ಆತೂರು.
ಗೌರವಾಧ್ಯಕ್ಷರು : ಸುಲೈಮಾನ್ ಮೌಲವಿ ಕಲ್ಲೆಗ
ಅದ್ಯಕ್ಷರು : ಅನ್ವರ್ ಮಾಣಿಲ
ಕಾರ್ಯಾದ್ಯಕ್ಷರು: ಅಝೀಝ್ ಸೋಂಪಾಡಿ
ಪ್ರಧಾನ ಕಾರ್ಯದರ್ಶಿ : ಇಸ್ಮಾಯಿಲ್ ತಿಂಗಳಾಡಿ
ಕೋಶಾಧಿಕಾರಿ : ಉಸ್ಮಾನ್ ಕೆಮ್ಮಿಂಜೆ
ಉಪಾಧ್ಯಕ್ಷರು : ಯೂಸುಫ್ ಈಶ್ವರಮಂಗಳ, ಮುಹಮ್ಮದ್ ಪಳ್ಳತ್ತೂರು, ಉಸ್ಮಾನ್ ಮರೀಲ್, ಅಶ್ರಫ್ ಎಂ ಎ ದೇಲಂಪಾಡಿ.
ಕಾರ್ಯನಿರ್ವಾಹಕ ಕಾರ್ಯದರ್ಶಿ: ಹೈದರ್ ಅಲಿ ಈಶ್ವರಮಂಗಲ.
ಕಾರ್ಯದರ್ಶಿಗಳು : ಆಸಿಫ್ ಮರೀಲ್, ಸಿದ್ದೀಕ್ ಸುಳ್ಯ, ಲತೀಫ್ ಆರ್ತಿಕೆರೆ,ತಾಜುದ್ದೀನ್ ಕೊಚ್ಚಿ.
ಸಂಘಟನಾ ಕಾರ್ಯದರ್ಶಿ : ಶಂಸುದ್ದೀನ್ ಇಂದುಮೂಲೆ, ಅಶ್ರಫ್ ಸಿ ಎ ದೇಲಂಪಾಡಿ,ಮೂಸ ಕುಂಞಿ ಕಾವು.
ಲೆಕ್ಕ ಪರಿಶೋಧಕರು: ಅಶ್ರಫ್ ಪರ್ಲಡ್ಕ, ರಿಫಾಯಿ ಗೂನಡ್ಕ.
ಸಂಚಾಲಕರು: ಅಶ್ರಫ್ ಆರ್ತಿಕೆರೆ, ಅಬ್ಬಾಸ್ ಕೇಕುಡೆ, ಅಬ್ದುಲ್ ಖಾದರ್ ಹಾಜಿ ಸಂಪ್ಯ,ಶೆರೀಫ್ ಕಟ್ಟತ್ತಾರ್, ನವಾಝ್ ಬಿಸಿ ರೋಡ್, ಬಷೀರ್ ಕೆಮ್ಮಿಂಜೆ, ಆಸಿಫ್ ಸಿಬಾರ, ಜಾಬಿರ್ ಬಪ್ಪಳಿಗೆ,ಇಬ್ರಾಹಿಮ್ ಆತೂರು, ಅಲೀ ಮಲಪ್ಪುರ, ಶಂಸೀರ್ ಅಡ್ಡೂರು, ಝೈನುದ್ದೀನ್ ಎಸ್ ಎಮ್ ಮಾಂತೂರು, ರಫೀಕ್ ಕೊಡಗು, ಇಕ್ಬಾಲ್ ಅರ್ಶದಿ,ಅಬ್ದುಲ್ ರಹಿಮಾನ್ ಪೆರಾಜೆ, ಸಿದ್ದೀಕ್ ಅಡ್ಡೂರು, ಇಫ್ತಿಕಾರ್ ಕಣ್ಣೂರು, ಶಬೀರ್ ಪಡುಬಿದ್ರೆ, ನಾಸಿರ್ ಬಪ್ಪಳಿಗೆ, ಶಾಹುಲ್ ಬಿಸಿ ರೋಡ್, ಝಕರಿಯ ಮುಲಾರ್, ಇಸಾಕ್ ಕುಡ್ತಮುಗೇರು, ಮುಹಮ್ಮದ್ ಪೈವಲಿಕೆ, ಮುನೀರ್ ಸಾಲ್ಮರ, ಜಲೀಲ್ ಉಕ್ಕುಡ, ಜಲೀಲ್ ವಿಟ್ಲ, ಅಲಿ ಮಣಿಲ , ಹಸೈನಾರ್ ದುಗ್ಗುಲಡ್ಕ
ಧಾರ್ಮಿಕ ಸಲಹೆಗಾರರು: ಹಮೀದ್ ಮುಸ್ಲಿಯಾರ್ ಅನ್ಸಾರ್ ಹುದವಿ, ಹುಸೈನ್ ಫೈಝಿ ಕೊಡಗು.
ಮಾಧ್ಯಮ ಸಂಯೋಜಕರು: ಅಬೂಬಕ್ಕರ್ ಮುಂಡೋಳೆ,ಜಾಬಿರ್ ಬೆಟ್ಟಂಪಾಡಿ,ನವಾಝ್ ಕಟ್ಟತ್ತಾರ್, ಸಿದ್ದೀಕ್ ಈಶ್ವರಮಂಗಳ.
ಕಾರ್ಯಕಾರಿ ಸಮಿತಿ ಸದಸ್ಯರು : ಆಸಿಫ್ ಮಾಡನ್ನೂರು, ಮೊಯಿದೀನ್ ದೇಲಂಪಾಡಿ, ಅನ್ಸಾಫ್ ಪಾತೂರು, ಅಬೂಬಕ್ಕರ್ ಬಜಾಲ್, ಉಮ್ಮರ್ ಮಾಣಿ, ರಫೀಕ್ ಮುಕ್ವೆ, ರಫೀಕ್ ಸಾಲ್ಮರ, ಸಯೀದ್ ಪುರುಷರಕಟ್ಟೆ, ಅಝರ್ ಹಂಡೇಲು, ನಿಝಾಮ್ ತೋಡಾರು, ಬಾತಿಷ ಪರ್ಲಡ್ಕ, ಮಜೀದ್ ಮುಕ್ರಂಪಾಡಿ, ಅಬ್ದುಲ್ ಬಾರಿ ಕೊಳ್ತಿಗೆ, ಮೊದಲಾದವರನ್ನು ಆಯ್ಕೆ ಮಾಡಲಾಯಿತು ಮತ್ತು ತಕ್ಬೀರ್ನೊಂದಿಗೆ ಅನುಮೋದಿಸಲಾಯಿತು.
ನೂರುಲ್ ಹುದಾ ಯುಎಇ ಸಮಿತಿಯ ಗೌರವಾದ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರು ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿ ಶುಭ ಹಾರೈಸಿದರು. ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು ಅವರು ಮಾತನಾಡಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಕಿರುಪರಿಚಯ ನೀಡಿದರು ಮತ್ತು ಇದರ ಅಭಿವೃದ್ಧಿಗಾಗಿ ಶ್ರಮಿಸುವ ನೂರುಲ್ ಹುದಾ ದುಬೈ ಸಮಿತಿಯನ್ನು ಅಭಿನಂದಿಸಿ ನೂತನ ಸಮಿತಿಗೆ ಶುಭ ಹಾರೈಸಿದರು, ಯುಎಇ ಸಮಿತಿಯ ಗೌರವ ಸಲಹೆಗಾರರಾದ ಜನಾಬ್ ಸಲೀಂ ಅಲ್ತಾಫ್ ಪರಂಗಿಪೇಟೆ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಶಿಕ್ಷಣ ಕ್ಷೇತ್ರಗಳಿಂದ ಸಾಮಾಜಿಕ ಸಮತೋಲನ, ಸಕಾಲಿಕ ಅಗತ್ಯತೆಯಾದ ಜಾತಿ ಧರ್ಮಗಳ ಅಂತರಗಳನ್ನು ಕಡಿಮೆಗೊಳಿಸಿ ಎಲ್ಲಾ ಜಾತಿ ಧರ್ಮಗಳ ಜನರನ್ನು ಒಗ್ಗೂಡಿಸಿ ನಾಡಿನ ಸೌಹಾರ್ದತೆಗೆ ಪೂರಕವಾಗುವ ವಿದ್ಯಾಭ್ಯಾಸ ಕಾರ್ಯಕ್ರಮಗಳೊಂದಿಗೆ ಮುಂದೆ ಸಾಗಬೇಕು ಎಂದು ಹೇಳುತ್ತಾ ನೂತನ ಸಮಿತಿಗೆ ಶುಭ ಹಾರೈಸಿದರು, ಸಭೆಯಲ್ಲಿ ನೂರ್ ಮುಹಮ್ಮದ್ ನೀರ್ಕಜೆ, ಮುಹಮ್ಮದ್ ರಫೀಕ್ ಆತೂರು, ಎಂ ಪಿ ಕೆ ಪಲ್ಲಂಗೊಡು, ಅಬ್ಬಾಸ್ ಕೇಕುಡೆ, ಝೈನುದ್ದೀನ್ ಎಸ್ ಎಮ್ ಮಾಂತೂರು, ಅಶ್ರಫ್ ದೇಲಂಪಾಡಿ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು. ನೂತನ ಸಮಿತಿಯ ಅಧ್ಯಕ್ಷರಾದ ಜನಾಬ್ ಅನ್ವರ್ ಮಾಣಿಲ ಅವರು ಮಾತನಾಡಿ ವಿದ್ಯಾ ಸಂಸ್ಥೆಯ ಅಭಿವೃದ್ಧಿಗಾಗಿ ಎಲ್ಲರೂ ಸಮಿತಿಯೊಂದಿಗೆ ಉತ್ತಮ ರೀತಿಯಲ್ಲಿ ಸಹಕರಿಸಬೇಕೆಂದು ಕೇಳಿಕೊಂಡರು.
ಸಭೆಯಲ್ಲಿ ಶಾರ್ಜಾ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಗಾಳಿಮುಕ, ನೈಫ್ ಸಮಿತಿಯ ಗೌರವಾದ್ಯಕ್ಷರಾದ ಅಬ್ದುಲ್ ಸಲಾಮ್ ಬಪ್ಪಲಿಗೆ, ಕಿಸೈಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ ಸಂಪ್ಯ, ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಇಂದುಮೂಲೆ, ಕೋಶಾದಿಕಾರಿ ಲತೀಫ್ ಆರ್ತಿಗೆರೆ, ಬರ್ ದುಬೈ ಸಮಿತಿಯ ಕೋಶಾದಿಕಾರಿ ಅಶ್ರಫ್ ಆರ್ತಿಗೆರೆ, ಡಿಐಪಿ ಇವಾನ್ಸ್ ಸಮಿತಿಯ ಅಧ್ಯಕ್ಷರಾದ ಅಲೀ ಮಲಪ್ಪುರ, ಪ್ರಧಾನ ಕಾರ್ಯದರ್ಶಿ ಶಬೀರ್ ಪಡುಬಿದ್ರೆ, ನಖೀಲ್ ಸಮಿತಿಯ ಅಧ್ಯಕ್ಷರಾದ ಮನೀರ್ ಸಾಲ್ಮರ, ಅಬೂಹೈಲ್ ಸಮಿತಿಯ ಕೋಶಾದಿಕಾರಿ ಮುಹಮ್ಮದ್ ಪಳ್ಳತ್ತೂರು ಹಾಗೂ ದುಬೈ ಮತ್ತು ಕ್ಲಸ್ಟರ್ ಸಮಿತಿಗಳ ಪ್ರಮುಖ ಪದಾಧಿಕರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ನೂತನ ಪ್ರಧಾನ ಕಾರ್ಯದರ್ಶಿ ಜನಾಬ್ ಇಸ್ಮಾಯಿಲ್ ತಿಂಗಳಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗೈದರು, ಅಶ್ರಫ್ ಪರ್ಲಡ್ಕ ಅವರು ಆಕರ್ಷಕ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಿಸಿದರು.