ಲಂಡನ್, ಮಾ.06 (DaijiworldNews/PY) : ಬಹುಕೋಟಿ ರೂಪಾಯಿ ಹಗರಣಗಳ ಆರೋಪಿ ನೀರವ್ ಮೋದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬ್ರಿಟನ್ ಹೈಕೋರ್ಟ್ ತಿರಸ್ಕರಿಸಿದೆ.
ನೀರವ್ ಮೋದಿ ಅವರು ಸಲ್ಲಿಸಿರುವ ಎಲ್ಲಾ ಐದು ಜಾಮೀನು ಅರ್ಜಿಗಳು ವಜಾ ಆಗಿದ್ದು, ಗುಜರಾತ್ ಮೂಲದ ವಜ್ರದ ವ್ಯಾಪಾರಿ ನೀರವ್ ಮೋದಿ ಬ್ರಿಟನ್ನಲ್ಲಿ ಸೆರೆವಾಸದಲ್ಲಿದ್ದಾರೆ.
ನೀರವ್ ಮೋದಿ ಮತ್ತು ಆತನ ಸಂಬಂಧಿ ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ನ ಬಹುಕೋಟಿ ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಆದರೆ, ಇವರು ಭಾರತದ ಪೊಲೀಸರ ಕಣ್ಣು ತಪ್ಪಿಸಿ ವಿದೇಶಕ್ಕೆ ಪಲಾಯನ ಮಾಡಿದ್ದರು.
ನೀರವ್ ಮೋದಿ ಸದ್ಯ ವ್ಯಾಂಡ್ಸ್ ವರ್ಥ್ ಜೈಲಿನಲ್ಲಿದ್ದು, ಭಾರತದ ಗಡಿಪಾರಿಗೆ ಪ್ರಯತ್ನಗಳು ಸಿದ್ದವಾಗುತ್ತಿವೆ.