ಬೇಜಿಂಗ್, ಮಾ. 07 (Daijiworld News/MB) : ಚೀನಾದಲ್ಲಿ ಪತ್ತೆಯಾಗಿ ಇಡೀ ವಿಶ್ವದಲ್ಲೇ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ನಿಂದಾಗಿ ಚೀನಾದಲ್ಲಿ ಮೃತರ ಸಂಖ್ಯೆ ಮೂರು ಸಾವಿರ ದಾಟಿದೆ. ಈ ಬೆನ್ನಲ್ಲೇ ಚೀನಾದ ಕಂಪೆನಿಯೊಂದು ಕೊರೊನಾ ವೈರಸ್ ಸೋಂಕು ತಡೆಯಬಲ್ಲಂತಹ ಹೊಸ ಕಾರೊಂದನ್ನು ಬಿಡುಗಡೆಗೊಳಿಸಿದೆ.
ಈ ನೂತನ ಕಾರನ್ನು ಚೀನಾದ ಗೀಲೆ ಕಂಪೆನಿ ಉತ್ಪಾದಿಸಿದ್ದು ಇದರಲ್ಲಿ ಕೊರೊನಾ ವೈರಸ್ ಹರಡುವಿಕೆ ತಡೆಯಬಹುದಾದಂತ ಫೀಚರ್ಗಳನ್ನು ಅಳವಡಿಕೆ ಮಾಡಲಾಗಿದದೆ. ಹಾಗೆಯೇ ಜೊತೆಗೆ ಕಾರಿನೊಳಗೆ ವಿಶೇಷವಾದ ಏರ್ಫ್ಯೂರಿಫೈಯರ್ ಇದೆ. ಈ ಏರ್ಪ್ಯೂರಿಫೈಯರ್ ವೈರಸ್, ಬ್ಯಾಕ್ಟೀರಿಯಾ ತಡೆಯಲು ಸಮರ್ಥವಾಗಿದೆ ಎಂದು ಕಂಪೆನಿ ತಿಳಿಸಿದೆ.
ಇಂಟಲಿಜನ್ಸ್ ಏರ್ಫ್ಯೂರಿಫೈಯರ್ ಸಿಸ್ಟಂ (ಐಎಪಿಎಸ್) ಅಳವಡಿಲಾಗಿರುವ ಈ ಕಾರು ಅಧಿಕೃತ ಸರ್ಟಿಫಿಕೇಶನ್ ಕೂಡ ಪಡೆದಿದೆ.
ಇಂಟಲಿಜನ್ಸ್ ಏರ್ಫ್ಯೂರಿಫೈಯರ್ ಸಿಸ್ಟಂ ಕಾರಿಗೆ ಹೊರಗಿನಿಂದ ಧೂಳು, ವೈರಸ್, ಬ್ಯಾಕ್ಟಿರಿಯಾ ಮಿಶ್ರಿತ ಗಾಳಿ ಬರದಂತೆ ತಡೆದು, ಗಾಳಿಯನ್ನು ಶುದ್ಧ ಗಾಳಿಯನ್ನಾಗಿ ಪರಿವರ್ತಿಸುತ್ತದೆ ಎಂದು ಕಂಪೆನಿ ಹೇಳಿದೆ.
ಈ ಕಾರು ಕೊರೊನಾ ವೈರಸ್ ತಡೆಯಬಲ್ಲದು ಎಂದು ಈವರೆಗೂ ಸಾಬೀತಾಗದಿದ್ದರೂ, ವೈರಸ್ ಮತ್ತು ಬ್ಯಾಕ್ಟೀರಿಯಾ ತಡೆಯಬಲ್ಲಂತಹ ವಿನೂತನ ಫೀಚರ್ ಈ ಕಾರಿನಲ್ಲಿ ಅಳವಡಿಸಲಾಗಿದೆ ಎಂದು ಈಗಾಗಲೇ ದೃಢಪಟ್ಟಿದೆ.