ಚೀನಾ, ಮಾ. 07 (Daijiworld News/MB) : ಜಗತ್ತಿನಾದ್ಯಂತ ಜನರ ಮಾರಣ ಹೋಮಕ್ಕೆ ಕಾರಣವಾಗಿರುವ ಕೊರೊನಾ ಸೋಂಕಿನಿಂದಾಗಿ ಜನರು ಆತಂಕಕ್ಕೊಳಗಾಗಿದ್ದು ತಮ್ಮ ಸುರಕ್ಷತೆಗಾಗಿ ಬಳಸಲು ಬೇಕಾಗುವ ಹಲವು ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ. ಹ್ಯಾಂಡ್ ಸ್ಯಾನಿಟೈಜರ್ ಮತ್ತು ಪೇಸ್ ಮಾಸ್ಕ್ಗಳಂತಹ ವಸ್ತುಗಳ ಖರೀದಿ ಸಾಮಾನ್ಯವಾಗಿದ್ದರು ಇನ್ನು ಹಲವರು ಟಾಯ್ಲೆಟ್ ಪೇಪರ್ ಮತ್ತು ಕಾಂಡೋಮ್ಗಳಂತಹ ವಸ್ತುಗಳು ಖರೀದಿ ಮಾಡುತ್ತಿದ್ದು ಈಗ ಟಾಯ್ಲೆಟ್ ಪೇಪರ್ ಮತ್ತು ಕಾಂಡೋಮ್ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಆಸ್ಟ್ರೇಲಿಯಾದಲ್ಲಿ ವೈರಸ್ ಹರಡುವ ಬಗ್ಗೆ ಆತಂಕಗಳು ಹೆಚ್ಚಾಗುತ್ತಿದ್ದಂತೆ, ಟಾಯ್ಲೆಟ್ ಪೇಪರ್ಗಳಿಗೂ ಬೇಡಿಕೆ ಹೆಚ್ಚಾಗಿದೆ. ಸಿಡ್ನಿ ಮೂಲದ ಕೆಲವು ಸೂಪರ್ ಮಾರ್ಕೆಟ್ಗಳು ಒಬ್ಬರಿಗೆ ನಾಲ್ಕು ಪ್ಯಾಕ್ ಖರೀದಿ ಮಿತಿಯನ್ನು ಜಾರಿಗೆ ತರಲು ಒತ್ತಾಯಿಸಿದೆ ಎಂದು ವರದಿಯಾಗಿದೆ.
ಟಾಯ್ಲೆಟ್ ಪೇಪರ್ ತಯಾರಿಸುವ ಹಲವು ಕಾರ್ಖಾನೆಗಳು ಆಸ್ಟ್ರೇಲಿಯಾದಲ್ಲಿ ಇದ್ದರೂ ಪೇಪರ್ಗೆ ದೊಡ್ಡ ಮಟ್ಟದ ಅಭಾವ ಉಂಟಾಗಿದೆ. ಆಸ್ಟ್ರೇಲಿಯಾ ಅಷ್ಟೇ ಅಲ್ಲದೇ ಸಿಂಗಾಪುರ, ಜಪಾನ್ ಮತ್ತು ಹಾಂಗ್ಕಾಂಗ್ಗಳಲ್ಲಿಯೂ ಟಾಯ್ಲೆಟ್ ಪೇಪರ್ಗಳಿಗೆ ಇದೇ ರೀತಿಯ ಅಭಾವ ಕಂಡುಬಂದಿದೆ.
ಈಗ ವಿಡಿಯೋ ಗೇಮ್ಗಳು ಮತ್ತು ಯೋಗ ಮ್ಯಾಟ್ಗಳಂತಹ ವಸ್ತುಗಳ ಮಾರಾಟ ಹೆಚ್ಚಾಗಿದ್ದು ಅದರೊಂದಿಗೆ ಕಾಂಡೋಮ್ ಮಾರಾಟದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಹಲವಾರು ಜನರು ಕೊರೊನಾ ವೈರಸ್ ಸೋಂಕು ತಗಲುದಂತೆ ಹ್ಯಾಂಡ್ಗ್ಲೌಸ್ ಬದಲಾಗಿ ತಮ್ಮ ಬೆರಳುಗಳಿಗೆ ಕಾಂಡೋಮ್ ಬಳಸಲು ಆರಂಭಿಸಿದ್ದಾರೆ. ಇದರಿಂದಾಗಿ ಕಾಂಡೋಮ್ ಪ್ಯಾಕೆಟ್ಗಳ ಮಾರಾಟ ಹೆಚ್ಳವಾಗಿದದೆ ಎಂದು ವರದಿ ಹೇಳಿದೆ.
ಹಾಗೆಯೇ ಕೂದಲು ಕತ್ತರಿಸುವ ಸಾಧನಗಳು ಹಾಗೂ ಬೇಕರಿ ಪರಿಕರಗಳನ್ನು ಅಧಿಕವಾಗಿ ಬಿಕರಿಯಾಗುತ್ತಿದೆ ಎಂದು ವರದಿಯಾಗಿದೆ.