ಕತಾರ್,ಮಾ.08(DaijiworldNews/PY): ಸತತವಾಗಿ 20 ಸಂವತ್ಸರಗಳಿಂದ ಸೇವೆ, ಸಂಸ್ಕೃತಿಗಳಿಗೆ ಸಂಕೇತವಾಗಿರುವ ಕರ್ನಾಟಕ ಸಂಘ ಕತಾರ್ 2020-2021 ತನ್ನ ನೂತನ ಆಡಳಿತ ಸಮಿತಿಯನ್ನು ರಚಿಸಿದ್ದು, ಸಂಘದ ಅಧ್ಯಕ್ಷರಾಗಿ ಮೈರ್ಪಾಡಿ ನಾಗೇಶ್ ರಾವ್ ಅವರು ಆಯ್ಕೆಯಾಗಿದ್ದಾರೆ.
ಪೂರ್ವ ನಿಯೋಜಿತ ಸಮಿತಿಯನ್ನು ಅಧ್ಯಕ್ಷರಾಗಿದ್ದ ವೆಂಕಟ ರಾಯರ ಸಮ್ಮುಖದಲ್ಲಿ , ಭಾರತೀಯ ಸಾಂಸ್ಕೃತಿಕ ಕೇಂದ್ರದ ಪ್ರತಿನಿಧಿಯಾದ ಕೆ. ಎಂ.ವರ್ಘೀಸ್ ಅವರ ನೇತೃತ್ವದಲ್ಲಿ ಫೆ.28 ಶುಕ್ರವಾರದಂದು ವಿಸರ್ಜಿಸಲಾಯಿತು.
ಕರ್ನಾಟಕ ಸಂಘ ಕತಾರ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಒಂದು ಅಂಗ ಸಂಸ್ಥೆಯಾಗಿದ್ದು, ಕತಾರಿನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಭಾರತೀಯ ಒಂದು ವೈವಿಧ್ಯಮಯ ಸಂಘಟನೆ. ಸುಮಾರು 800ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ವಿವಿಧ ಸಾಂಸ್ಕೃತಿಕ, ಕ್ರೀಡಾ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಅಧ್ಯಕ್ಷರು ಹಾಗೂ ಸದಸ್ಯರ ಪಟ್ಟಿ:
ಅಧ್ಯಕ್ಷರು ಮೈರ್ಪಾಡಿ ನಾಗೇಶ್ ರಾವ್
ಉಪಾಧ್ಯಕ್ಷರು ಅನಿಲ್ ಕುಮಾರ್ ಬೋಲೂರ್
ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಮನಾಥ್ ರಾವ್
ಖಜಾಂಜಿ ಲಕ್ಕಪ್ಪ ಲಕ್ಕೇಗೌಡ
ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಅಕ್ಷಯ ಶೆಟ್ಟಿ
ಕ್ರೀಡಾ ಕಾರ್ಯದರ್ಶಿ ಸಂಜಯ್ ಕುದರಿ
ಜಂಟಿ ಕಾರ್ಯದರ್ಶಿ ಮತ್ತು ಕನ್ನಡ ಸಂಬಂಧಿತ ಸಂಚಾಲಕರು ಕಿಶೋರ್.ವಿ.
ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಸಂಚಾಲಕರು ಕುಮಾರಸ್ವಾಮಿ. ಸಿ.ಆರ್
ಮಹಿಳಾ ಸಂಚಾಲಕರು ಶ್ರೀಮತಿ ಸುಶೀಲ ಸುನೀಲ್
ಮಕ್ಕಳ ಮತ್ತು ವಿಶೇಷ ಅವಶ್ಯಕತೆಗಳ ಸಂಚಾಲಕರು ಶ್ರೀಮತಿ ರಶ್ಮಿ ಜಯರಾಮ
ಸದಸ್ಯತ್ವ ಮತ್ತು ನಿರ್ದೇಶಾಂಕ ಸಂಚಾಲಕರು ನೂರ್ ಅಹ್ಮದ್
ಆಯ್ಕೆಯಾಗಿದ್ದಾರೆ.