ಜೆರುಸಲೇಂ, ಮಾ.11 (DaijiworldNews/PY) : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದು, ಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ಮಾ.17ರಿಂದ ಆರಂಭವಾಗಬೇಕಿದ್ದ ವಿಚಾರಣೆ ಮುಂದೂಡಬೇಕು ಎಂಬ ಮನವಿಯನ್ನು ನ್ಯಾಯಾಧೀಶರು ಮಂಗಳವಾರ ತಿರಸ್ಕರಿಸಿದ್ದಾರೆ.
ವಿಚಾರಣೆ ಮುಂದೂಡುವಂತೆ ನೆತನ್ಯಾಹು ಪರ ವಕೀಲರು ಮನವಿ ಮಾಡಿದ್ದು, ತಮ್ಮ ಕಕ್ಷೀದಾರನ ವಿರುದ್ದ ಸಲ್ಲಿಕೆ ಮಾಡಲಾಗಿರುವ ಸಾಕ್ಷ್ಯಗಳ ಬಗ್ಗೆ ಪರಿಶೀಲನೆ ಮಾಡಲು ಹೆಚ್ಚುವರಿ ಸಮಯ ಬೇಕಾಗಿದೆ ಎಂದು ತಿಳಿಸಿದ್ಧಾರೆ.