ನ್ಯೂಯಾರ್ಕ್, ಮಾ.11 (DaijiworldNews/SM): ಕೊರೊನಾ ವೈರಸ್ ನಿಂದಾಗಿ ವಿಶ್ವದ ಅರ್ಥವ್ಯವಸ್ಥೆಗೆ 2 ಟ್ರಿಲಿಯನ್ ಡಾಲರ್ ನಷ್ಟವಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ಅಂಕ್ ಟಡ್ ತಿಳಿಸಿದೆ.
ವಿಶ್ವದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವನ್ನು ಶೇ.2.5ರಷ್ಟು ಕುಗ್ಗಿಸುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಅಭಿವೃದ್ಧಿ ಸಮ್ಮೇಳನದ ಜಾಗತೀಕರಣ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ರಿಚರ್ಡ್ ಕೌಜೋ-ರೈಟ್ ಹೇಳಿದ್ದಾರೆ.
ಮಾನವ ಜೀವ ಹಾನಿಯ ಜೊತೆಗೆ ವಿಶ್ವದ ಅರ್ಥ ವ್ಯವಸ್ಥೆಗೆ 2 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟ ಉಂಟು ಮಾಡಲಿದೆ. ಇದು ಹಲವು ರೀತಿಯ ಜಾಗತಿಕ ಆರ್ಥಿಕ ಅನಿಶ್ಚತತೆಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.