ವಾಷಿಂಗ್ಟನ್, ಮಾ. 12 (Daijiworld News/MB) : ಕೊರೊನಾ ಭೀತಿ ಹಿನ್ನಲೆಯಲ್ಲಿ ಯುರೋಪಿನಿಂದ ಅಮೆರಿಕಾಕ್ಕೆ ಇರುವ ಎಲ್ಲಾ ಪ್ರಯಾಣ ಮಾರ್ಗವನ್ನು 30 ದಿನಗಳವರೆಗೂ ರದ್ದುಗೊಳಿಸವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಕೊರೊನಾವನ್ನು ವಿದೇಶಿ ವೈರಸ್ ಎಂದು ಹೇಳಿರುವ ಅವರು ಶೀಘ್ರವಾಗಿ ರೋಗ ಹರಡುವುದನ್ನು ತಡೆಗಟ್ಟಲು ಈ ನಿಯಮವನ್ನು ರೂಪಿಸಲಾಗಿದೆ. ಈಗಾಗಲೇ ಅಮೆರಿಕಾದಲ್ಲಿ 1,100 ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಷೇರು ಮಾರುಕಟ್ಟೆಗಳನ್ನು ಕುಸಿದು ಬಿದ್ದಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಇದು ಆರ್ಥಿಕ ಬಿಕ್ಕಟ್ಟು ಅಲ್ಲ, ನಿರ್ಬಂಧಗಳು ಕೇವಲ ತಾತ್ಕಲಿಕ, ನಾವು ರಾಷ್ಟ್ರವಾಗಿ ಮತ್ತು ಪ್ರಪಂಚವಾಗಿ ಜಯಿಸುತ್ತೇವೆ ಎಂದು ಟ್ರಂಪ್ ಎಂದಿದ್ದಾರೆ.
ಕೊರೊನಾ ವೈರಸ್ ಅನ್ನು ಸಾಂಕ್ರಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಪರಿಗಣಿಸಿದ್ದು, ಈಗಾಗಲೇ ಈ ಮಾರಕ ಸೋಂಕು 1,23,000 ಕ್ಕೂ ಅಧಿಕ ಜನರಿಗೆ ತಗಲಿದೆ, ಹಾಗೂ 3200 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.