ರಿಯಾದ್, ಮಾ.12 (DaijiworldNews/PY) : ರಿಯಾದ್ನಲ್ಲಿ ಮಹಾಮಾರಿ ಕೊರೊನಾ ವೈರಸ್ ಪ್ರಕರಣವು 45ಕ್ಕೆ ತಲುಪಿದ್ದು, ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಸೌದಿ ಅರೇಬಿಯಾದ ಆಡಳಿತವು ಮಾರ್ಚ್ 12ರ ಗುರುವಾರದಂದು ಯುರೋಪಿಯನ್ ಯುನಿಯನ್ಗೆ ಬರುವ ಹಾಗು ಹೋಗುವ ಪ್ರಯಾಣಕ್ಕೆ ನಿಷೇಧ ಹೇರಿದೆ. ಅಲ್ಲದೇ, ತೈಲ ಸಮೃದ್ದ ರಾಷ್ಟ್ರವು, ಏಷ್ಯಾ ಹಾಗೂ ಆಫ್ರಿಕಾದ 12 ದೇಶಗಳ ಮೇಲೆಯೂ ಪ್ರಯಾಣ ನಿರ್ಬಂಧವನ್ನು ವಿಧಿಸಿದೆ.
ಸಾಂದರ್ಭಿಕ ಚಿತ್ರ
ದೇಶದಲ್ಲಿ ವರದಿಯಾದ 45 ಪ್ರಕರಣಗಳಲ್ಲಿ 21 ಈಜಿಫ್ಟಿನವರಾಗಿದ್ದು, ಧನಾತ್ಮಕ ಪರೀಕ್ಷೆ ನಡೆಸಿ ಇತ್ತೀಚೆಗೆ ಈಜಿಫ್ಟ್ನಿಂದ ಬಂದ ವ್ಯಕ್ತಿಯಿಂದ ಕೊರೊನಾ ವೈರಸ್ ಬಂದಿದೆ ಎನ್ನಲಾಗಿದೆ. 45 ಪ್ರಕರಣಗಳಲ್ಲಿ ಕೇವಲ ಒಂದು ಮಾತ್ರ ಚೇತರಿಸಿಕೊಂಡಿದ್ದು, ಉಳಿದ ಎಲ್ಲರೂ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ.
ಪ್ರಯಾಣಕ್ಕೆ ಹಾಗೂ ನಿಷೇಧಿಸಿರುವ ದೇಶಗಳ ಇತ್ತೀನ ಪಟ್ಟಿಗೆ ಭಾರತವೂ ಸೇರಿದೆ. ಭಾರತವನ್ನು ಹೊರತುಪಡಿಸಿ, ಇತರ ಏಷ್ಯಾ ಹಾಗೂ ಆಫ್ರಿಕನ್ ರಾಷ್ಟ್ರಗಳೆಂದರೆ, ಶ್ರೀಲಂಕಾ, ಪಾಕಿಸ್ತಾನ, ಫಿಲ್ಲಿಫೈನ್ಸ್, ದಕ್ಷಿಣ ಸುಡಾನ್,ಇಥಿಯೋಪಿಯಾ, ಕೀನ್ಯಾ ಜಿಬೌಟಿ, ಸೊಮಾಲಿಯಾ, ಎಟ್ರಿಟಿಯಾ ರಾಷ್ಟ್ರಗಳಿಗೆ ನಿಷೇಧ ಹೇರಲಾಗಿದೆ.
ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಭಾರತದ ಹಾಗೂ ಫಿಲ್ಲಿಫೈನ್ಸ್ನ ಆರೋಗ್ಯ ಕಾರ್ಯಕರ್ತರಿಗೆ ನಿರ್ಬಂಧವಿಲ್ಲ. ಅಲ್ಲದೇ, ಸಾಗಾಟ ಹಾಗೂ ವ್ಯಾಪಾರಗಳಿಗೆ ನಿರ್ಬಂಧವಿಲ್ಲ.
ಸೌದಿಯ ನಾಗರಿಕರಿಗೆ ಹಾಗೂ ಮಾನ್ಯವಾದ ವೀಸಾ ಹೊಂದಿರುವವರಿಗೆ ಮಾತ್ರ 72 ಗಂಟೆಯ ಒಳಗೆ ರಾಜ್ಯಕ್ಕೆ ಪ್ರವೇಶಿಸಲು ಅವಕಾಶವಿದೆ. ಇದಾದ ಬಳಿಕ ಪ್ರಯಾಣ ನಿಷೇಧವು ಪರಿಣಾಮಕಾರಿಯಾಗಲಿದೆ.
ಇತ್ತೀಚೆಗೆ ಕೊರೊನಾ ವೈರಸ್ ಪೀಡಿತ ಯಾವುದೇ ದೇಶಗಳಿಗೆ ಪ್ರವಾಸ ಕೈಗೊಂಡಿರುವ ಜನರನ್ನು ಸಂಪರ್ಕ ಸೇವಾ ಕೇಂದ್ರಕ್ಕೆ ವರದಿ ಮಾಡಲು ಅಥವಾ ಟೋಲ್ ಫ್ರೀ ನಂಬರ್ 937ಕ್ಕೆ ಕರೆ ಮಾಡಲು ಸೌದಿ ಅರೇಬಿಯಾ ಸಚಿವಾಲಯ ತಿಳಿಸಿದೆ.