ವಾಷಿಂಗ್ಟನ್, ಮಾ13 ( Daijiworld News/MSP): ಕೊರೊನಾ ಭೀತಿಯಿಂದ ಒದ್ದಾಡುತ್ತಿರುವ ಜಗತ್ತು, ಪ್ರಾಚೀನ ಭಾರತೀಯ ಸಂಸ್ಕೃತಿಯ ಮೊರೆ ಹೋಗಿರುವುದು ಸ್ಪಷ್ಟವಾಗಿದೆ. ಇದೀಗ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ನಮಸ್ತೆ ಮೊರೆ ಹೋಗಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡಿರುವ ಐರಿಷ್ ಪ್ರಧಾನಮಂತ್ರಿ ಲಿಯೋ ವರದಕರ್ ಅವರನ್ನು ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತ ಕೋರುವ ವೇಳೆ ಕೈ ಮುಗಿದು ಶುಭಾಷಯ ಸಲ್ಲಿಸಿ ಮಾತುಕತೆ ಆರಂಭಿಸಿದರು,
ಈ ವೇಳೆ ಕೈ ಕುಲುಕುವ ಸಂಪ್ರದಾಯದ ಬದಲು "ನಮಸ್ತೆ" ಎನ್ನುವುದು ಕೊರೊನಾ ವಿರುದ್ಧ ಹೋರಾಡಲು ಇರುವ ಪ್ರಾಥಮಿಕ ಅಸ್ತ್ರ ಎಂದು ಎಂದು ಉಭಯ ನಾಯಕರು ಹೇಳಿದರು. ಈ ವೇಳೆ ಮಾತನಾಡದ ಟ್ರಂಪ್ ಇತ್ತೀಚೆಗೆ ಭಾರತ ಪ್ರವಾಸದಲ್ಲಿದ್ದಾಗ ಅಲ್ಲಿನ ಪ್ರಧಾನಿಯೂ ಸೇರಿಂದತೆ ಎಲ್ಲರೂ ತಮ್ಮನ್ನು "ನಮಸ್ತೆ" ಎನ್ನುವ ಮೂಲಕವೇ ಆದರ ಸ್ವಾಗತಿಸಿದರು. ಅಲ್ಲದೇ ನಮಸ್ತೆಯ ಮಹತ್ವ ಕೂಡ ತಮಗೆ ಭಾರತದ ಪ್ರವಾಸದ ಬಳಿಕಷ್ಟೇ ಅರ್ಥವಾಯಿತು ಎಂದು ಟ್ರಂಪ್ ಹೇಳಿದ್ದಾರೆ. ಭಾರತೀಯರ ಪರಂಪರೆಯ ನಮಸ್ತೆ ಹಾಗೂ ಜಪಾನ್ ಸಂಸ್ಕೃತಿಯಂತೆ ಪರಸ್ಪರ ತಲೆಬಾಗಿ ಶೂಬ ಕೋರುವುದು ಕೊರೊನಾ ಹರಡದಂತೆ ತಡೆಯುವ ರೀತಿಗಳಲ್ಲಿ ಉತ್ತಮ ಮಾರ್ಗ ಎಂದು ಹೇಳಿದರು.
ಕೊರೊನಾ ವೈರಸ್ ಭೀತಿಯಿಂದಾಗಿ ಇಡೀ ಜಗತ್ತು ಭಾರತೀಯ ಸಂಸ್ಕೃತಿಯ ಪ್ರತೀಕವಾದ ನಮಸ್ತೆಗೆ ಮೊರೆ ಹೋಗಿದ್ದು, ಇತ್ತೀಚೆಗೆ ಹಲವು ದೇಶದ ನಾಯಕರು ನಮಸ್ತೆಯೇ ಉತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.