ವಾಷಿಂಗ್ಟನ್, ಮಾ. 14 (Daijiworld News/MB) : ಮೈಕ್ರೋಸಾಫ್ಟ್ ಸಂಸ್ಥಾಪಕ, ತಂತ್ರಜ್ಞಾನ ಕ್ಷೇತ್ರದ ದಿಗ್ಗಜ, ಬಿಲ್ ಗೇಟ್ಸ್ ಸಂಸ್ಥೆಯ ಆಡಳಿತ ಮಂಡಳಿಯಿಂದ ಹೊರನಡೆದು ಆಶ್ಚರ್ಯ ಉಂಟು ಮಾಡಿದ್ದು ಜೊತೆಗೆ ಬರ್ಕ್ಷೈರ್ ಹಾಥ್ವೇ ಕಂಪೆನಿಯ ಆಡಳಿತ ಮಂಡಳಿಯಿಂದಲೂ ಹೊರನಡೆದಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಅವರು, "ಮೈಕ್ರೋಸಾಫ್ಟ್ ಮತ್ತು ಬರ್ಕ್ ಶೈರ್ ಹಾಥ್ ವೇ ಕಂಪೆನಿಗಳ ಆಡಳಿತ ಮಂಡಳಿಗಳಿಂದ ನಿವೃತ್ತನಾಗುವ ನಿರ್ಧಾರ ತೆಗೆದುಕೊಂಡಿದ್ದೇನೆ. ಇನ್ನುಳಿದ ನನ್ನ ಬದುಕಿನ ಸಮಯವನ್ನು ಜಾಗತಿಕ ಆರೋಗ್ಯ, ಅಭಿವೃದ್ಧಿ, ಶಿಕ್ಷಣ ಮುಂತಾದ ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತೇನೆ. ಹಾಗೆಯೇ ಹವಮಾನ ಬದಲಾವಣೆಯ ಸಮಸ್ಯೆಗೆ ಪರಿಹಾರ ಹುಡುಕಲು ನನ್ನ ಹೆಚ್ಚಿನ ಸಮಯ ಮೀಸಲಿರಿಸುತ್ತೇನೆ ಎಂದು ಹೇಳಿದ್ದಾರೆ.
ಮೈಕ್ರೋಸಾಫ್ಟ್ ಮತ್ತು ಬರ್ಕ್ ಶೈರ್ ಕಂಪೆನಿಗಳ ನಾಯಕತ್ವ ಎಂದಿಗೂ ಬಲಿಷ್ಟವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಸಕಾಲ ಎಂದು ನಿರ್ಧರಿಸಿದೆ. ಕಂಪೆನಿಯ ಆಡಳಿತ ಮಂಡಳಿಯಿಂದ ಹೊರನಡೆದ ಎಂಬ ಮಾತ್ರಕ್ಕೆ ಕಂಪೆನಿಯಿಂದಲೇ ದೂರ ಉಳಿದಿಲ್ಲ. ಎಂದಿಗೂ ನನ್ನ ಬದುಕಿನ ವೃತ್ತಿಯ ಒಂದು ಮಹತ್ವ ಭಾಗ ಮೈಕ್ರೋಸಾಫ್ಟ್. ಹಾಗೆಯೇ ಸತ್ಯಾ ನಾಡೆಲ್ಲಾ ಮತ್ತು ತಾಂತ್ರಿಕ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು ಸಂಸ್ಥೆಯ ಮಹತ್ವಾಕಾಂಕ್ಷೆಯನ್ನು ತಲುಪಲು ಬೇಕಾದ ಮಾರ್ಗವನ್ನು ರೂಪಿಸುವ ಸಲುವಾಗಿ ಕೆಲಸ ಮಾಡುತ್ತಿರುತ್ತೇನೆ" ಎಂದಿದ್ದಾರೆ.