ವಾಷಿಂಗ್ಟನ್, ಮಾ. 14 (Daijiworld News/MB) : ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿರುವ ಹಿನ್ನಲೆಯಲ್ಲಿ ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ಅಧಿಕ ಸಂಪನ್ಮೂಲ ದೊರಕುವಂತೆ ಮಾಡುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಇದು ಕೊರೊನಾ ವೈರಸ್ ಸೋಂಕಿನ ತೀವ್ರತೆಗೆ ದೇಶದಲ್ಲಿ ಹಿಡಿದ ಕನ್ನಡಿಯಾಗಿದೆ. ಈ ಸವಾಲನ್ನು ಎದುರಿಸುವ ಸಲುವಾಗಿ 50 ಶತಕೋಟಿ ಡಾಲರ್ ಹಣವನ್ನು ರಾಜ್ಯಗಳು ಹಾಗೂ ಪ್ರಾಂತ್ಯಗಳಿಗೆ ಮೀಸಲಿರಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಹಾಗೆಯೇ ಈ ತುರ್ತು ಆರೋಗ್ಯ ಸ್ಥಿತಿಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡುವ ಸಲುವಾಗಿ ಆಸ್ಪತ್ರೆಗಳು ಹಾಗೂ ವೈದ್ಯರ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶುಮೆರ್ ಹಾಗೂ ಇತರ 35 ಮಂದಿ ಸೆನೆಟ್ ಸದಸ್ಯರು ತುರ್ತು ಪರಿಸ್ಥಿತಿ ಘೋಷಿಸುವಂತೆ ಕೋರಿ ಬುಧವಾರ ಟ್ರಂಪ್ಗೆ ಪತ್ರ ಬರೆದಿದ್ದರು.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ರಿಪಬ್ಲಿಕ್ ಪಕ್ಷದ ಸೆನೆಟ್ ನಾಯಕ ಚಂಕ್ ಶುಮೆರ್ ರಾಜ್ಯಗಳಿಗೆ ಹಾಗೂ ಸ್ಥಳಿಯ ಆಡಳಿತಕ್ಕೆ ನೆರವು ನೀಡುವ 1988 ರ ಕಾನೂನಿನ ಅಡಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದ್ದು 42.6 ಕೋಟಿ ಡಾಲರ್ ನೆರವು ವಿಕೋಪ ಪರಿಹಾರ ನಿಧಿಯಿಂದ ಈಗಾಗಲೇ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಇದುವರೆಗೆ ಅಮೆರಿಕದಲ್ಲಿ 1700 ಕ್ಕೂ ಹೆಚ್ಚು ಮಂದಿಗೆ ಸೋಂಕು ತಗಲಿದ್ದು 41 ಮಂದಿ ಸಾವನ್ನಪ್ಪಿದ್ದಾರೆ.