ಲಂಡನ್, ಮಾ.14 (DaijiworldNews/PY) : ಕೊರೊನಾ ಸೋಂಕು ಆಗ ತಾನೇ ಹುಟ್ಟಿದ ಮಗುವಿನಲ್ಲಿಯೂ ಪತ್ತೆಯಾಗಿದ್ದು, ತಾಯಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮಗು ಲಂಡನ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಜನನವಾಗಿದ್ದು, ಹುಟ್ಟಿದ ತಕ್ಷಣವೇ ರಕ್ತ ಮಾದರಿ ಪರೀಕ್ಷೆ, ಮಲ-ಮೂತ್ರ ಪರೀಕ್ಷೆ ಹಾಗೂ ಗಂಟಲಿನ ಸ್ರಾವದ ಪರೀಕ್ಷೆಯನ್ನು ನಡೆಸಲಾಗಿದ್ದು, ಈ ಸಂದರ್ಭ, ಕೊರೊನಾ ಸೋಂಕು ಇರುವುದು ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿದ್ದು, ಶೀಘ್ರವೇ ಎಚ್ಚರಿಕೆ ವಹಿಸಿದ ವೈದ್ಯರು ತಾಯಿ ಹಾಗೂ ಮಗುವನ್ನು ಪ್ರತ್ಯೇಕ ವಿಭಾಗಕ್ಕೆ ವರ್ಗಾಯಿಸಿ, ಚಿಕಿತ್ಸೆ ನೀಡಿದ್ಧಾರೆ.
ಕೆಲವು ದಿನಗಳ ಗರ್ಭಿಣಿ ಮಹಿಳೆ ನ್ಯುಮೋನಿಯಾದಿಂದ ಬಳಲುತ್ತಿದ್ದರು. ಹೆರಿಗೆಯಾಗುವ ನಿರೀಕ್ಷೆಯಲ್ಲಿದ್ದ ಈ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಹಾಗಾಗಿ ಮಗುವಿಗೂ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ಧಾರೆ.