ಮ್ಯಾಡ್ರಿಡ್, ಮಾ.15 (DaijiworldNews/PY) : ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ಗೆ ಸ್ಪೇನ್ ದೇಶದ ಪ್ರಧಾನಿಯ ಪತ್ನಿಯೂ ತುತ್ತಾಗಿದ್ದಾರೆ.
ಕೊರೊನಾ ವೈರಸ್ಗೆ ಸ್ಪೇನ್ನ ಪ್ರಧಾನ ಮಂತ್ರಿ ಪೆಡ್ರೋ ಶ್ಯಾನ್ಶೇಜ್ ಅವರ ಪತ್ನಿ ಬೆಗೊನಾ ಗೊಮೇಜ್ ಅವರು ಪೀಡಿತರಾಗಿದ್ದು, ದೃಢಪಟ್ಟಿದೆ. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ ಕೆಲವೇ ಸಮಯದಲ್ಲಿ ಸ್ಪೇನ್ ಪ್ರಧಾನಿ ಅವರ ಪತ್ನಿಗೆ ಕೊರೊನಾ ವೈರಸ್ ದೃಢಪಟ್ಟಿದೆ.
ಇಟಲಿ ಹೊರತುಪಡಿಸಿದರೆ ಯುರೋಪ್ ದೇಶಗಳಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳಿರುವುದು ಸ್ಪೇನ್ನಲ್ಲಿ. 5753 ಜನರು ಇದುವರೆಗೆ ಸ್ಪೇನ್ನಲ್ಲಿ ಕೊರೊನ ಸೋಂಕು ಪೀಡಿತರಾಗಿದ್ದು, 183 ಜನರು ಮೃತಪಟ್ಟಿದ್ದಾರೆ.
ರಸ್ತೆಯಲ್ಲಿ ಓಡಾಡುವುದನ್ನು ಕೂಡ ಸ್ಪೇನ್ನಲ್ಲಿ ಜನರಿಗೆ ನಿರ್ಬಂಧಿಸಲಾಗಿದೆ. ಆದಷ್ಟು ಜನರು ಮನೆಯಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಸೂಪರ್ ಮಾರ್ಕೆಟ್ ಹಾಗೂ ಔಷದಿ ಮಳಿಗೆಗಳನ್ನು ಹೊರತು ಪಡಿಸಿ ಉಳಿದೆಲ್ಲವುಗಳನ್ನು ನಿರ್ಬಂಧಿಸಲಾಗಿದೆ.