ವಾಷಿಂಗ್ಟನ್, ಮಾ.15 (DaijiworldNews/PY) : ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವರದಿಯಲ್ಲಿ ನೆಗೆಟಿವ್ ಬಂದಿರುವುದಾಗಿ ವೈಟ್ ಹೌಸ್ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರಣಾಂತಿಕ ಕೊರೊನಾ ವೈರಸ್ ಜನರಿಗೆ ಭೀತಿ ಹುಟ್ಟಿಸಿದ್ದು, ಈ ಸೋಂಕಿಗೆ ಅಮೆರಿಕದಲ್ಲಿ ಬಲಿಯಾದವರ ಸಂಖ್ಯೆ 50ಕ್ಕೆ ಏರಿದೆ. ಡೊನಾಲ್ಡ್ ಟ್ರಂಪ್ ಇದಕ್ಕಾಗಿ ರಾಷ್ಟ್ರೀಯ ವಿಪತ್ತು ಘೋಷಿಸಿ, ಕೊರೊನಾ ಪರೀಕ್ಷೆಗೆ ತಾವೂ ಕೂಡಾ ಒಳಪಟ್ಟಿದ್ದರು.
ಪ್ಲೊರಿಡಾದ ನಿವಾಸದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಕೆಲವು ಬ್ರೆಜಿಲಿಯನ್ ಅಧಿಕಾರಿಗಳು ಕೆಲವು ದಿನಗಳ ಹಿಂದಷ್ಟೆ ಭೇಟಿಯಾಗಿದ್ದರು. ಆ ಅಧಿಕಾರಿಗಳಿಗೆ ಕೊರೊನ ವೈರಸ್ ಪಾಸಿಟಿವ್ ವರದಿ ಬಂದುದರಿಂದ ಟ್ರಂಪ್ ಅವರು ಕೂಡಾ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ಮಾಡಿಸಿಕೊಂಡಿದ್ದರು.
ಈ ವಿಚಾರವಾಗಿ ಮಾತನಾಡಿದ ಅವರು, ಹಲವು ಕ್ರಮಗಳನ್ನು ಜಗತ್ತಿಗೆ ಮಾರಕವಾಗಿ ಮರಿಣಮಿಸಿದ ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ತೆಗೆದುಕೊಳ್ಳಲಾಗುತ್ತದೆ. ಮೊದಲೇ ನಿಗದಿಯಾಗಿದ್ದ ಬ್ರಿಟನ್, ಐರ್ಲೆಂಡ್ ಸೇರಿದಂತೆ ಇನ್ನೀತರ ದೇಶಗಳ ಭೇಟಿಯನ್ನು ಈ ಕಾರಣದಿಂದ ರದ್ದು ಮಾಡಲಾಗಿದೆ ಎಂದು ತಿಳಿಸಿದರು.