ಮ್ಯಾಡ್ರಿಡ್, ಮಾ.16 (DaijiworldNews/PY) : ಚೀನಾದಲ್ಲಿ ಕೊರೊನಾ ತನ್ನ ಪ್ರಭಾವವನ್ನು ಕಡಿಮೆಗೊಳಿಸಿದ್ದರೂ, ಯುರೋಪ್ ದೇಶಗಳಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಪ್ರಮಾಣ ಇಟಲಿ ಹಾಗೂ ಸ್ಪೇನ್ನಲ್ಲಿ ತೀವ್ರವಾಗಿದ್ದು, 288 ಜನರು ಸ್ಪೇನ್ನಲ್ಲಿ ಮೃತಪಟ್ಟಿದ್ದಾರೆ.
ಸ್ಪೇನ್ನಲ್ಲಿ ಭಾನುವಾರ ಒಂದೇ ದಿನದಲ್ಲಿ 2 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಮಾರಣಾಂತಿಕ ಸೋಂಕು ಪೀಡಿತರ ಸಂಖ್ಯೆ ಸ್ಪೇನ್ನಲ್ಲೇ 7,753ಕ್ಕೆ ಏರಿಕೆಯಾಗಿದೆ. ಇಟಲಿಯ ಹೊರತಾಗಿ ಅತೀ ಹೆಚ್ಚು ಸಮಸ್ಯೆ ಅನುಭವಿಸುತ್ತಿರುವುದು ಸ್ಪೇನ್.
ಸ್ಪೇನ್ನಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನ ಕಾರಣದಿಂದ ನೂರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದುವರೆಗೆ ವಿಶ್ವದಲ್ಲಿ 6 ಸಾವಿರಕ್ಕೂ ಅಧಿಕ ಜನರು ಕೊರೊನಾ ಕಾರಣದಿಂದ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಭಾರತದಲ್ಲಿ ನೂರು ದಾಟಿದ್ದು, ಇದುವರೆಗೆ ಕನಾಟಕದಲ್ಲಿ 7 ಪ್ರಕರಣಗಳು ಪತ್ತೆಯಾಗಿದೆ.