ಲಂಡನ್, ಮಾ.16 (Daijiworld News/MB) : ಕೊರೊನಾ ವೈರಸ್ ಜಗತ್ತಿನಾದ್ಯಂತ ತನ್ನ ಕರಾಳ ಹಸ್ತ ಚಾಚಿದ್ದು ಇದರ ಭೀತಿ ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ಗೂ ತಟ್ಟಿದೆ. ಕೊರೊನಾ ಭೀತಿಯಿಂದಾಗಿ ಈಗ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಕೂಡಾ ತನ್ನ ಉಗ್ರರಿಗೆ ಯೂರೋಪ್ ಪ್ರವಾಸ ಹೋಗದಂತೆ ಸೂಚಿಸಿದೆ.
ಹಾಗೆಯೇ ಯುರೋಪ್ನಲ್ಲಿ ಯಾವುದೇ ಕಾರ್ಯಾಚರಣೆ ಮಾಡಬಾರದು. ಈಗಾಗಲೇ ಯುರೋಪ್ನಲ್ಲಿರುವ ಉಗ್ರರಲ್ಲಿ ಕೊರೊನಾ ಪತ್ತೆಯಾಗಿದ್ದಲ್ಲಿ ಅವರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಬರಬಾರದು. ಕೊರೊನಾ ವೈರಸ್ ಸಂಘಟನೆಯ ಸಹೋದರರಿಗೆ ಹರಡದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ತಿಳಿಸಿದೆ.
ಈ ಕುರಿತು ಐಸಿಸ್ ಮುಖವಾಣಿ ಅಲ್-ನಬಾದಲ್ಲಿ ಫತ್ವಾ ಹೊರಡಿಸಿದ್ದು, ಆರೋಗ್ಯವಾಗಿರುವ ಉಗ್ರರು ಯುರೋಪ್ ರಾಷ್ಟ್ರಗಳಿಗೆ ಪ್ರವಾಸ ಮಾಡಬೇಡಿ. ಹಾಗೆಯೇ ಕೊರೊನಾ ಇರುವ ಉಗ್ರರು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಬರಬೇಡಿ ಎಂದು ಸೂಚನೆ ನೀಡಿದೆ.