ವಾಷಿಂಗ್ಟನ್, ಮಾ.17 (Daijiworld News/MB): ಜರ್ಮನಿಯ ಸಂಸ್ಥೆಯೊಂದು ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿದ್ದು, ಆ ಸಂಸ್ಥೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಆಹ್ವಾನ ನೀಡಿದ್ದಾರೆ. ನಮ್ಮ ದೇಶಕ್ಕೆ ಬಂದು, ಲಸಿಕೆ ಅಭಿವೃದ್ಧಿಪಡಿಸಿದರೆ, ಭಾರೀ ಮೊತ್ತವನ್ನು ನೀಡುವುದಾಗಿ ಟ್ರಂಪ್ ಆ ಸಂಸ್ಥೆಗೆ ಆಫರ್ ನೀಡಿದ್ದಾರೆ ಎಂದು ವರದಿಯಾಗಿದೆ.
ಕ್ಯೂರ್ ವ್ಯಾಕ್ ಎಂಬ ಸಂಸ್ಥೆಯ ಸಿಇ ಒ ಡೇನಿಯಲ್ರೊಂದಿಗೆ ಮಾ.2 ರಂದೇ ಶ್ವೇತಭವನದಲ್ಲಿ ಟ್ರಂಪ್ ಸಭೆ ನಡೆಸಿದ್ದಾರೆ.
ಈ ಸಂದರ್ಭದಲ್ಲೇ ಡೇನಿಯಲ್ಗೆ ಟ್ರಂಪ್ ಅವರು ಭಾರೀ ಮೊತ್ತದ ಆಫರ್ ನೀಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.