ರೋಮ್, ಮಾ.19 (Daijiworld News/MB) : ಕೊರೊನಾ ವೈರಸ್ನಿಂದಾಗಿ ಇಟಲಿಯಲ್ಲಿ ಬೂದವಾರ ಒಂದೇ ದಿನದಲ್ಲಿ 475 ಮಂದಿ ಸಾವನ್ನಪ್ಪಿದ್ದಾರೆ ಎಂದು ದೇಶದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಇಟಲಿಯಲ್ಲಿ ಈವರೆಗೆ 31,506 ಜನರಿಗೆ ಕೊರೊನಾ ಸೋಂಕು ತಗುಲಿದ್ದು ಈ ಪೈಕಿ 2,978 ಜನರು ಸಾವನ್ನಪ್ಪಿದ್ದಾರೆ.
ವಿಶ್ವದಾದ್ಯಂತ 2 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದ್ದು 8 ಸಾವಿರಕ್ಕೂ ಅಧಿಕ ಮಂದಿ ಈ ಮಾರಕ ವೈರಸ್ಗೆ ಬಲಿಯಾಗಿದ್ದಾರೆ. 83 ಸಾವಿರಕ್ಕಿಂತ ಅಧಿಕ ಜನರು ಗುಣ ಮುಖರಾಗಿದ್ದಾರೆ ಎಂದು ಅಮೆರಿಕಾದ ಜಾನ್ ಹಾಪ್ಕಿನ್ ವಿಶ್ವವಿದ್ಯಾನಿಲಯ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಚೀನಾದಲ್ಲಿ ಮೊದಲ ಬಾರಿ ಕೊರೊನಾ ವೈರಸ್ ಕಂಡು ಬಂದ ವುಹಾನ್ ಪ್ರಾಂತ್ಯದಲ್ಲಿ ಬುಧವಾರ ಯಾವುದೇ ಹೊಸ ಸೋಂಕಿತ ಪ್ರಕರಣಗಳು ಕಂಡು ಬಂದಿಲ್ಲ. ಆದರೆ ಚೀನಾದ ಬೀಜಿಂಗ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಬುಧವಾರ ಒಂದು ದಿನವೇ 34 ಹೊಸ ಪ್ರಕರಣಗಳು ದಾಖಲಾಗಿವೆ.
ಒಟ್ಟು ಚೀನಾದಲ್ಲಿ ಸೋಂಕಿತರ ಸಂಖ್ಯೆ 80,928ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.