ಬೀಜಿಂಗ್, ಮಾ 19 ( Daijiworld News/MSP): ಜಗತ್ತಿನಾದ್ಯಂತ ತನ್ನ ಕಬಂಧಬಾಹು ಚಾಚಿರುವ ಕೊರೊನ ವೈರಣು ತನ್ನ ತವರೂರಿನಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಕೊರೋನಾ ವೈರಸ್'ನ ಕೇಂದ್ರ ಸ್ಥಾನ ಎನಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದೇ ಮೊದಲ ಬಾರಿಗೆ ಶೂನ್ಯಕ್ಕೆ ಬಂದಿದೆ.
ಸೋಮವಾರ ಹೊಸದಾಗಿ ಒಂದೇ ಒಂದು ಪ್ರಕರಣ ಮಾತ್ರ ದಾಖಲಾಗಿತ್ತು. ಆದರೆ ಬುಧವಾರ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು ವುಹಾನ್ ನಗರವನ್ನು ಕೊರೊನಾ ಮುಕ್ತ ಎಂದು ಚೀನಾ ಘೋಷಿಸಿದೆ.
ತನ್ನ ನೆಲದಲ್ಲಿ 3,000ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದ ಮಾರಕ ವೈರಾಣುವನ್ನು ಹೋಗಲಾಡಿಸುವಲ್ಲಿ ಇದೀಗ ಚೀನಾ ಯಶಸ್ವಿಯಾಗಿದೆ. ವೈರಸ್ ಹತೋಟಿಗೆ ಬಂದ ಹಿನ್ನೆಲೆ ಚೀನಾ ವೈದ್ಯಕೀಯ ಸಿಬ್ಬಂದಿಗಳನ್ನು ಹಿಂದಕ್ಕೆ ಕಳುಹಿಸುತ್ತಿದೆ. ಕೊರೋನಾ ತಡೆಗಾಗಿಯೇ ವುಹಾನ್ ನಲ್ಲಿ ಚೀನಾ 14 ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿತ್ತು. ಅವುಗಳೆನ್ನೆಲ್ಲಾ ಮುಚ್ಚಿದೆ.
ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದ ಹತೋಟಿ ಕ್ರಮವನ್ನು ಮೆಚ್ಚುಗೆ ಸೂಚಿಸಿದೆ ಇದರೊಂದಿಗೆ ತುರ್ತು ಕ್ರಮಗಳನ್ನು ಕೈಗೊಂಡಿದ್ದರೆ ಮತ್ತಷ್ಟು ಸಾವು-ನೋವನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದೆ.