ಇಸ್ಲಾಮಾಬಾದ್, ಮಾ.20 (DaijiworldNews/PY) : ಅಮೆರಿಕದಿಂದ ಸಿರಿಯಾಗೆ ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರಬೇಕು ಎಂದು ಹೊರಟಿದ್ದ ಪಾಕಿಸ್ತಾನಿ ವೈದ್ಯನನ್ನು ಬಂಧಿಸಲಾಗಿದೆ.
ಬಂಧಿತ ವೈದ್ಯ ಮೊಹಮ್ಮದ್ ಮಸೂದ್(28) ಎಂದು ಗುರುತಿಸಲಾಗಿದೆ. ಲಾಸ್ ಏಂಜಲೀಸ್ಗೆ ತೆರಳುತ್ತಿದ್ದ ವೈದ್ಯನನ್ನು ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದ್ದಾರೆ.
ವೈದ್ಯ ಸಿರಿಯಾದಲ್ಲಿರುವ ಐಎಸ್ಐಎಸ್ ಸಂಘಟನೆ ಸೇರಲು ಬಯಸಿದ್ದು, ಲಾಸ್ ಏಂಜಲಿಸ್ನಲ್ಲಿರುವ ಓರ್ವ ವ್ಯಕ್ತಿಯ ಸಹಾಯದಿಂದ ಕಾರ್ಗೋ ಹಡಗಿನ ಮೂಲಕ ತೆರಳುವವನಿದ್ದ. ಮೊಹಮದ್ ಮಸೂದ್ ಮೇಲೆ ಸಾಕಷ್ಟು ಪ್ರಕರಣಗಳಿವೆ. ಮೆಟೀರಿಯಲ್ಗಳನ್ನು ವಿದೇಶಿ ಉಗ್ರ ಸಂಘಟನೆಗಳಿಗೆ ರವಾನಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಸೂದ್ನನ್ನು ಮಾ.24ರವರೆಗೆ ವಶಕ್ಕೆ ನೀಡಲಾಗಿದೆ. ಜ.2020 ಹಾಗೂ ಮಾ.2020ರವರೆಗೆ ಮಸೂದ್ ಹಲವು ಹೇಳಿಕೆಗಳನ್ನು ನೀಡಿದ್ದ. ಕೊರೊನಾ ವೈರಸ್ನಿಂದಾಗಿ ಸಿರಿಯಾ ಗಡಿಯಲ್ಲಿ ನಿಷೇಧ ಹೇರಲಾಗಿದ್ದು, ಹೀಗಾಗಿ ಹಡಗಿನಲ್ಲಿ ತೆರಳಲು ಉಪಾಯ ಹೂಡಿದ್ದ.