ವಾಷಿಂಗ್ಟನ್, ಮಾ.21 (Daijiworld News/MB) : ಅಮೆರಿಕದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ತಡೆಗಟ್ಟುವ ಜವಾಬ್ದಾರಿಯನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರಿಗಿದ್ದು ಈಗ ಅವರ ಕಚೇರಿ ಸಿಬ್ಬಂದಿಗೇ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಟ್ರಂಪ್ ಅಥವಾ ಉಪಾಧ್ಯಕ್ಷ ಪೆನ್ಸ್ ಈ ಸೋಂಕು ತಗಲಿದ ಅಧಿಕಾರಿಯೊಂದಿಗೆ ನಿಕಟವಾಗಿ ಸಂಪರ್ಕದಲ್ಲಿ ಇರಲಿಲ್ಲ. ಯಾರು ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು ಎಮದು ಪತ್ತೆ ಹಚ್ಚಲಾಗುತ್ತಿದೆ ಎಂದು ಮಾಧ್ಯಮ ಕಾರ್ಯದರ್ಶಿ ಕೀತ್ ಮಿಲ್ಲರ್ ತಿಳಿಸಿದ್ದಾರೆ.
ಕೊರೊನಾ ತಡೆಗೆ ಕ್ರಮಗಳನ್ನು ದಿನನಿತ್ಯ ಮಾಹಿತಿ ನೀಡಲು ಟ್ರಂಪ್ ಸಭೆ ಕರೆದಾಗ ಪೆನ್ಸ್, ಟ್ರಂಪ್ ಹತ್ತಿರದಲ್ಲೇ ಕುಳಿತುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಹಾಗೆಯೇ ಟ್ರಂಪ್ ಹಾಗೂ ಪೆನ್ಸ್ ಅವರಿದ್ದ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರಿಗೂ ಸೋಂಕು ತತಗುಲಿತ್ತು. ಈ ಹಿನ್ನಲೆಯಿಂದಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸ್ವರ್ಯ ದಿಗ್ಭಂಧನ ವಿಧಿಸಿಕೊಂಡಿದ್ದರು.
ಕಳೆದ ವಾರ ಟ್ರಂಪ್ ಅವರ ಪರೀಕ್ಷೆ ಮಾಡಿದ್ದು ಋಣಾತ್ಮಕ ಫಲಿತಾಂಶ ಬಂದಿತ್ತು.
ಅಮೆರಿಕದಲ್ಲಿ ಈ ಸೋಂಕಿನಿಂದಾಗಿ ಈವರೆಗೆ 216 ಜನರು ಮೃತಪಟ್ಟಿದ್ದು 16,600 ಜನರಿಗೆ ಸೋಂಕು ತಗುಲಿದೆ.